ಮಂಗಳೂರು: ಆಗಸ್ಟ್ 15ರ ಬಳಿಕ ದೇಶದಾದ್ಯಂತ ಎಲ್ಲಾ ಗ್ರಾಮ ಪಂಚಾಯತಿಗಳು ಅಭಿವೃದ್ಧಿ ಕಾರ್ಯಗಳು ಮತ್ತು ಆದಾಯ ಸಂಗ್ರಹಣೆಗೆ ಡಿಜಿಟಲ್ ಪಾವತಿ ಕಡ್ಡಾಯಗೊಳಿಸಬೇಕು ಎಂದು ಪಂಚಾಯತ್ ರಾಜ್ ಸಚಿವಾಲಯ ಸೂಚಿಸಿದೆ.
ಡಿಜಿಟಲ್ ಪಾವತಿ ಅಳವಡಿಸಿದ್ದ ಗ್ರಾಮ ಪಂಚಾಯತಿಗಳನ್ನು ಯುಪಿಐ-ಶಕ್ತ ಎಂದು ಘೋಷಿಸಲಾಗುವುದು. ಈ ಕುರಿತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಚಿವಾಲಯ ಪತ್ರ ಬರೆದಿದೆ. ಆಯಾ ರಾಜ್ಯದ ಮುಖ್ಯಮಂತ್ರಿ ಸಂಸದರು ಮತ್ತು ಶಾಸಕರಂತಹ ಗಣ್ಯರ ಸಮ್ಮುಖದಲ್ಲಿ ಯುಪಿಐ-ಶಕ್ತ ಗ್ರಾ.ಪಂ ಗಳನ್ನು ಘೋಷಿಸಬೇಕು ಮತ್ತು ಉದ್ಘಾಟಿಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಪಂಚಾಯತ್ ರಾಜ್ ಸಚಿವಾಲಯದ ಕಾರ್ಯದರ್ಶಿ ಸುನಿಲ್ ಕುಮಾರ್ ಸುಮಾರು ಶೇಕಡ 98 ರಷ್ಟು ಗ್ರಾಮ ಪಂಚಾಯತಿಗಳು ಈಗಾಗಲೇ ಯುಪಿಐ ಆಧಾರಿತ ಪಾವತಿಗಳನ್ನು ಬಳಸಲು ಆರಂಭಿಸಿವೆ. ಉಳಿದ ಗ್ರಾಮ ಪಂಚಾಯತಿಗಳು ಈ ವಿಧಾನ ಅನುಸರಿಸಲು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆ.