ಅಜಿತ್ ಪವಾರ್ ಸೇರಿದಂತೆ 8 ಶಾಸಕರ ಅನರ್ಹತೆಗೆ ಅರ್ಜಿ ಸಲ್ಲಿಸಿದ ಎನ್‌ಸಿಪಿ

ಮಂಗಳೂರು: ಮಹಾವಿಕಾಸ್ ಅಘಾಡಿ ತೊರೆದು ಶಿವಸೇನೆಯ ಏಕನಾಥ್ ಚಿಂದೇ ನೇತೃತ್ವದ ಎನ್.ಡಿ.ಎ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಅಜಿತ್ ಪವಾರ್ ಹಾಗೂ 8 ಮಂದಿ ಶಾಸಕರ ವಿರುದ್ಧ ಅರ್ಜಿ ಸಲ್ಲಿಸಲಾಗಿದೆ ಎಂದು ಮಹಾರಾಷ್ಟ್ರ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ ಅಧ್ಯಕ್ಷ ಜಯಂತ್ ಪಾಟೀಲ್ ಪ್ರಕಟಿಸಿದ್ದಾರೆ.‌

ಅವರ ನಡೆ ಅಕ್ರಮ ಶರದ್ ಪವಾರ್ ಹಾಗೂ ಪಕ್ಷದ ಅನುಮತಿ ಪಡೆಯದೆ ನಿರ್ಧಾರ ಕೈಗೊಂಡಿರುವ ಅವರ ವಿರುದ್ಧ ಜಯಪ್ರಕಾಶ್ ದಂಡೇಗಾಂಕರ್ ನೇತೃತ್ವದ ಶಿಸ್ತು ಸಮಿತಿಗೆ ದೂರು ಸಲ್ಲಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಪಕ್ಷದ ನೀತಿಯ ವಿರುದ್ಧವಾಗಿ ನಡೆದುಕೊಂಡ ಕ್ಷಣದಿಂದಲೇ ತಾಂತ್ರಿಕವಾಗಿ ಅವರು ಅನರ್ಹರಾಗುತ್ತಾರೆ ಎಂದು ಸ್ಪಷ್ಟನೆ ನೀಡಿದವರು ಸುಪ್ರೀಂಕೋರ್ಟಿನ ಇತ್ತೀಚಿನ ತೀರ್ಪಿನ ಪ್ರಕಾರ ಪಕ್ಷ ಜಾರಿಗೊಳಿಸಿದ ಅಧಿಕೃತ ಎಂದು ಪರಿಗಣಿಸಲಾಗುತ್ತದೆ. ಶಾಸಕರ ಸಂಖ್ಯೆ ಇಲ್ಲಿ ಲೆಕ್ಕಕ್ಕೆ ಬರುವುದಿಲ್ಲ ಆದ್ದರಿಂದ ಜಿತೇಂದ್ರ ಅವರನ್ನು ಪಕ್ಷದ ಅಧಿಕೃತ ವ್ಯಕ್ತಿ ಎಂದು ಪರಿಗಣಿಸಲಾಗಿದ್ದು, ಇವರ ಆದೇಶ ಎಲ್ಲಾ ಶಾಸಕರಿಗೆ ಅನ್ವಯವಾಗುತ್ತದೆ ಎಂದು ವಿಶ್ಲೇಷಿಸಿದರು.

LEAVE A REPLY

Please enter your comment!
Please enter your name here