ಗಾಳಿ ಮಳೆಗೆ ಶಿಕ್ಷಣ ಸಂಸ್ಥೆಯ ಮೇಲ್ಚಾವಣಿ ಕುಸಿತ – ತಪ್ಪಿದ ಅನಾಹುತ

ಮಂಗಳೂರು: ಭಾರೀ ಮಳೆಗೆ ಮಂಗಳೂರು ಹೊರವಲಯದ ತಲಪಾಡಿಯ ಶಾರದಾ ಸ್ಕೂಲ್ ಮತ್ತು ಕಾಲೇಜಿನ ಮೇಲ್ಚಾವಣಿ ಸೀಟು ಕುಸಿದು ಬಿದ್ದಿದೆ. ಇದರಿಂದ ಶಾಲಾ ವಾಹನಗಳು ಸಂಪೂರ್ಣ ಜಖಂಗೊಂಡಿದೆ.

ಜುಲೈ 5 ರಂದು ಈ ಘಟನೆ ನಡೆದಿದ್ದು ಜುಲೈ 6 ರಂದು ಬೆಳಕಿಗೆ ಬಂದಿದೆ. ದೇವಿ ನಗರದ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಕ್ಯಾಂಪಸ್ ನ ಆರು ಅಂತಸ್ತಿನ ಶಾಲಾ ಕಟ್ಟಡದ ಮೇಲೆ ಇತ್ತೀಚಿಗೆ ಶೀಟ್ ಹಾಕಲಾಗಿತ್ತು. ಭಾರೀ ಗಾಳಿ ಮಳೆಯಿಂದಾಗಿ ಶೀಟ್ ಚಾವಣಿ ಕುಸಿದು ಬಿದ್ದಿದೆ. ಇನ್ನು ಸೀಟ್ ಜೊತೆಗೆ ಹಾಕಲಾಗಿದ್ದ ಬಾರಿ ಗಾತ್ರದ ಕಬ್ಬಿಣದ ಸಲಾಕೆಗಳು ಉರುಳಿ ಬಿದ್ದಿವೆ. ಮಳೆ ಹಿನ್ನಲೆಯಲ್ಲಿ ಜಿಲ್ಲಾಡಳಿತ ಶಾಲಾ-ಕಾಲೇಜುಗಳಿಗೆ ರಜೆ ನೀಡಿದ್ದರಿಂದ ನಡೆಯಬಹುದಾಗಿದ್ದ ಬಾರಿ ಅನಾಹುತ ತಪ್ಪಿದೆ.

LEAVE A REPLY

Please enter your comment!
Please enter your name here