ಬ್ಲಡ್ ಡೋನರ್ಸ್ ಮಂಗಳೂರು ನೂತನ ಸಮಿತಿ ಅಸ್ತಿತ್ವಕ್ಕೆ

ಮಂಗಳೂರು: ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಂಸ್ಥೆಯ ವಾರ್ಷಿಕ ಮಹಾ ಸಭೆಯು ಡಾನ್ ಬಾಸ್ಕೊ ಹಾಲ್ ನಲ್ಲಿ ಜು.6ರಂದು ಸಂಸ್ಥೆಯ ಅಧ್ಯಕ್ಷ ಸಿದ್ದೀಕ್ ಮಂಜೇಶ್ವರ ಅಧ್ಯಕ್ಷತೆಯಲ್ಲಿ ನಡೆಯಿತು.

ಚುನಾವಣಾ ಉಸ್ತುವಾರಿಗಳಾದ ಶಾಹುಲ್ ಹಮೀದ್ ಕಾಶಿಪಟ್ನ ಹಾಗೂ ಫರ್ಝಾನ್ ಸಿದ್ದಕಟ್ಟೆ ನೇತೃತ್ವದಲ್ಲಿ ನೂತನ ಸಮಿತಿಯನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು.
ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಸಿದ್ದೀಕ್ ಮಂಜೇಶ್ವರ, ಅಧ್ಯಕ್ಷರಾಗಿ ನವಾಝ್ ಕಲ್ಲರಕೋಡಿ, ಉಪಾಧ್ಯಕ್ಷರಾಗಿ ಅಶ್ರಫ್ ಉಪ್ಪಿನಂಗಡಿ, ಲತೀಫ್ ಎಚ್.ಎಸ್.ಎ ಉಪ್ಪಿನಂಗಡಿ, ಪ್ರದಾನ ಕಾರ್ಯದರ್ಶಿಯಾಗಿ ಶಾಹುಲ್ ಹಮೀದ್ ಕಾಶಿಪಟ್ನ, ಕಾರ್ಯದರ್ಶಿಯಾಗಿ ಫಯಾಝ್ ಮಾಡೂರು, ಜೊತೆ ಕಾರ್ಯದರ್ಶಿ‌ಯಾಗಿ ನಿಸಾರ್ ಉಳ್ಳಾಲ, ಕೋಶಾಧಿಕಾರಿಯಾಗಿ ಅಬ್ದುಲ್ ಹಮೀದ್ ಪಜೀರ್, ಸದಸ್ಯರಾಗಿ ಸಲಾಂ ಚೊಂಬುಗುಡ್ಡೆ, ಅಬ್ದುಲ್ಲಾ ಭವಾನಿ, ಅಫ್ತಾಬ್ ಕುಲಾಯಿ, ಮೊಯಿದು ಸೀತಾಂಗೋಳಿ, ಫರ್ಝಾನ್ ಸಿದ್ದಕಟ್ಟೆ, ಫಾರೂಕ್ ಬಿಗ್ ಗ್ಯಾರೇಜ್, ಮುನಾಫಿಲ್ ಜೆಪ್ಪು, ಮನ್ಸೂರ್ ಕಲ್ಲಡ್ಕ, ಹಕೀಮ್ ಕೆ ಸಿ ರೋಡ್ ಇವರನ್ನು ಆಯ್ಕೆ ಮಾಡಲಾಯಿತು.

ಕ್ಯಾಂಪ್ ಇನ್ ಚಾರ್ಜ್ ಆಗಿ ಫರ್ಝಾನ್ ಸಿದ್ದಕಟ್ಟೆ, ಮಾಧ್ಯಮ ಉಸ್ತುವಾರಿಯಾಗಿ ಹಫೀಝ್ ಓಮಾನ್, ನಿಝಾಮುದ್ದೀನ್ ತಬೂಕ್, ಝಹೀರ್ ಶಾಂತಿನಗರ, ಫಾರೂಕ್ ಇವರನ್ನು ನೇಮಿಸಲಾಯಿತು.
ಗಲ್ಫ್ ಸಮಿತಿ ಅಧ್ಯಕ್ಷರಾಗಿ ನಝೀರ್ ಬಿಕರ್ನಕಟ್ಟೆ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ದಾವೂದ್ ಬಜಾಲ್, ಇಮ್ಮು ಉಳ್ಳಾಲ್, ಪ್ರಧಾನ ಕಾರ್ಯದರ್ಶಿಯಾಗಿ ರಝಾಕ್ ಸಾಲ್ಮರ, ಕಾರ್ಯದರ್ಶಿಯಾಗಿ ನೌಫಲ್ ಬಜ್ಪೆ ಇವರನ್ನು ಆಯ್ಕೆ ಮಾಡಲಾಯಿತು. ಆರ್ಥಿಕ ವ್ಯವಹಾರಗಳ ಇನ್ ಚಾರ್ಜ್ ಆಗಿ ಇರ್ಫಾನ್ ಕಲ್ಲಡ್ಕ, ಮೆಡಿಕಲ್ ಇನ್ ಚಾರ್ಜ್ ಆಗಿ ಜಮಾಲ್ ಕಲ್ಲಡ್ಕ, ಬ್ಲಡ್ ಬ್ಯಾಂಕ್ ಇಂಚಾರ್ಜ್ ಆಗಿ ತೌಫಿಕ್ ಕುಲಾಯಿ, ಸಿರಾಜ್ ಪಜೀರ್, ಮನ್ಸೂರ್ ಕೋಡಿಜಾಲ್, ಸಮೀರ್ ನಾರಾವಿ, ಮುನೀರ್ ಚೊಂಬುಗುಡ್ಡೆ, ರೌಫ್ ಪಾಲ್ತಾಡ್, ಇಮ್ತಿಯಾಝ್ ಜೋಕಟ್ಟೆಯವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಶಾಹುಲ್ ಹಮೀದ್ ಕಾಶಿಪಟ್ನ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here