ಯಮುನಾ ನದಿ ನೀರಿನ ಮಟ್ಟ ಏರಿಕೆ – ದೆಹಲಿಯಲ್ಲಿ ಹೈ ಅಲರ್ಟ್ ಘೋಷಣೆ

ಮಂಗಳೂರು(ನವದೆಹಲಿ): ಯಮುನಾ ನದಿ ನೀರಿನ ಮಟ್ಟ 206.24 ಮೀಟರ್ ಗೆ ಏರಿಕೆಯಾಗಿದ್ದು ಅಪಾಯಕಾರಿ ಮಟ್ಟ ತಲುಪಿದೆ. ಈ ಹಿನ್ನಲೆಯಲ್ಲಿ ದೆಹಲಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ಕೇಂದ್ರ ಜಲ ಆಯೋಗ ತಿಳಿಸಿದೆ. ಕೇಂದ್ರ ಜಲ ಆಯೋಗದ ಮಾಹಿತಿ ಪ್ರಕಾರ ಅಪಾಯಕಾರಿ ಮಟ್ಟ 205.33 ಮೀಟರ್ ಆಗಿದೆ. ಹರಿಯಾಣದ ಯಮುನಾ ನಗರ ಜಿಲ್ಲೆಯಲ್ಲಿರುವ ಹಥಿನಿಕುಂಡ್ ಬ್ಯಾರೇಜ್ ನಿಂದ ಇಂದು ಬೆಳಿಗ್ಗೆ 2.5 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ. ಸಿಡಬ್ಲ್ಯೂಸಿ ಜೊತೆ ನಿರಂತರ ಸಂಪರ್ಕದಲ್ಲಿರುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ. ನದಿ ತೀರದಲ್ಲಿ ವಾಸಿಸುವ 41 ಸಾವಿರ ಜನರನ್ನು ಗುರುತಿಸಲಾಗಿದ್ದು ಅವರಿಗಾಗಿ ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.


ಜು.9 ರಂದು 45 ಸಾವಿರ ಕ್ಯೂಸೆಕ್ ನೀರನ್ನು ಹಥಿನಿಕುಂಡ್ ಬ್ಯಾರೇಜಿನಿಂದ ಯಮುನಾ ನದಿಗೆ ಹರಿ ಬಿಡಲಾಗಿತ್ತು. ಜು.10ರಂದು ರಾತ್ರಿ ಹೆಚ್ಚುವರಿಯಾಗಿ ಮೂರು ಲಕ್ಷ ಮತ್ತು ಇಂದು ಬೆಳಿಗ್ಗೆ 2.5 ಲಕ್ಷ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಇದೇ ಬ್ಯಾರೇಜ್ ನಿಂದ 1978 ರಲ್ಲಿ 3.21 ಲಕ್ಷ ಕ್ಯೂಸೆಕ್
ನೀರನ್ನು ಹೊರ ಬಿಟ್ಟ ಪರಿಣಾಮ ಯಮುನಾ ನದಿ ನೀರಿನ ಮಟ್ಟ 207.49 ಕ್ಕೆ ತಲುಪಿತ್ತು. ಇದರಿಂದ ಉಂಟಾಗಿದ್ದ ಪ್ರವಾಹಕ್ಕೆ ದೆಹಲಿ ಅಂದು ಸಾಕ್ಷಿಯಾಗಿತ್ತು.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here