



ಮಂಗಳೂರು (ಸುಳ್ಯ): ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಸ್ವಂತ ತಮ್ಮಂದಿರೇ ಅಣ್ಣನನ್ನು ಕೊಚ್ಚಿ ಕೊಲೆಗೈದ ಘಟನೆ ಮಡಿಕೇರಿ ತಾಲೂಕಿನ ಸಂಪಾಜೆ ಸಮೀಪದ ಚೆಂಬು ಗ್ರಾಮದಲ್ಲಿ ನಡೆದಿದೆ.







ಇಲ್ಲಿನ ಕುದ್ರೆ ಪಾಯ ನಿವಾಸಿ ಉಸ್ಮಾನ್ ಹತ್ಯೆಯಾದ ದುರ್ದೈವಿ. ಸತ್ತಾರ್, ರಫೀಕ್, ಇಸುಬು, ಅಬ್ಬಾಸ್, ಉಸ್ಮಾನ್ ಸಹೋದರರಾಗಿದ್ದು ಇವರು ಕುದ್ರೆ ಪಾಯದಲ್ಲಿ ಸುಮಾರು 50 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಇದೇ ಭೂಮಿ ವಿಚಾರದಲ್ಲಿ ಸಹೋದರರ ನಡುವೆ ವಿವಾದ ಏರ್ಪಟ್ಟಿದ್ದು, ಉಳಿದ ಸಹೋದರರು ಸೇರಿ ಉಸ್ಮಾನ್ ಎಂಬವರನ್ನು ಚೂರಿಯಿಂದ ಇರಿದು ಕೊಲೆಗೈದಿದ್ದಾರೆ. ಉಸ್ಮಾನ್ ಕುದ್ರೆ ಪಾಯದಲ್ಲಿ ಭೂಮಿ ಹೊಂದಿದ್ದು ಅರಂತೋಡಿನಲ್ಲೂ ಇವರಿಗೆ ಜಮೀನು ಇದೆ ಎಂದು ತಿಳಿದು ಬಂದಿದ್ದು ಪುತ್ತೂರಿನ ಸಂಪ್ಯದಲ್ಲಿ ನೆಲೆಸಿದ್ದರು ಎನ್ನಲಾಗುತ್ತಿದೆ. ಕೊಡಗು ಸಂಪಾಜೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.














