ಹನುಮಾನ್ ಲಂಗೂರ್(Semnopithecus)
ಮಕ್ಕಳಿಗಾಗಿ ವಿಶೇಷ ಮಾಹಿತಿ
ಗ್ರೇ ಲಂಗೊರ್ ಅಥವಾ ಹನುಮಾನ್ ಲಂಗೊರ್ ದಕ್ಷಿಣ ಏಷ್ಯಾದಲ್ಲಿ ಎಲ್ಲೆಡೆ ಹೆಚ್ಚಾಗಿ ಹರಡಿದೆ. ಇವು ಪ್ರಪಂಚದ ಹಳೇ ಕೋತಿಗಳ ಗುಂಪಿಗೆ ಸೇರಿದವುಗಳಾಗಿದ್ದು ಸೆಮ್‌ನೋಪಿಥೆಕಸ್ ಕುಲಕ್ಕೆ ಸೇರಿವೆ. 2001 ರಲ್ಲಿ ಎಲ್ಲಾ ವರ್ಗಗಳ ಉಪಜಾತಿಗಳಿಗೆ ತನ್ನದೇ ಆದ ಗುಂಪನ್ನು ನೀಡಬೇಕಾಗಿ ಒತ್ತಾಯಿಸಿದ್ದರಿಂದ ಈಗ ಏಳು ಜಾತಿಗಳನ್ನು ಗುರುತಿಸಿದ್ದಾರೆ. ಅನುವಂಶಿಕ ಸಾಕ್ಷಿಗಳ ಪ್ರಕಾರ ನೀಲ್‌ಗಿರೀಸ್ ಲಂಗೊರ್ ಗಳು ಮತ್ತು ಕೆನ್ನಿಲು ಬಣ್ಣದ ಮುಖದ ಲಂಗೊರ್ ಗಳು ಮೊದಲು ಟ್ರೆಚಿಪಿಥೆಕಸ್ ಗುಂಪಿಗೆ ಸೇರಿದವು ಎಂದು ಹೇಳಿದರೂ ಇವು ಸೆಮ್‌ನೋಪಿಥೆಕಸ್ ಕುಲಕ್ಕೆ ಸೇರಿದೆ.
ಗ್ರೇ ಲಂಗೊರ್ ಗಳು ದೊಡ್ಡವು ಮತ್ತು ಭೂಮಂಡಲದಲ್ಲಿ ತಕ್ಕ ಮಟ್ಟಿಗೆ ಇರುವಂಥವು. ಕಾಡುಗಳಲ್ಲಿ, ನಗರ ಪ್ರದೇಶಗಳಲ್ಲಿ, ಆವೃತ ಅವಾಸಸ್ಥಾನಗಳಲ್ಲಿ ವಾಸಿಸುತ್ತವೆ. ಇವು ಹೆಚ್ಚಾಗಿ ಕಡಿಮೆ ಎತ್ತರವಿರುವ ಹಾಗೂ ಮಧ್ಯಮ ಜಾಗಗಳಲ್ಲಿ ಕಂಡುಬರುತ್ತದೆ. ಆದರೆ ನೇಪಾಳದ ಗ್ರೇ ಲಂಗೊರ್ ಗಳು ಮತ್ತು ಕಾಶ್ಮೀರದ ಗ್ರೇ ಲಂಗೊರ್ 4,000 ಮೀಟರ್ (13,000 ಅಡಿ) ಎತ್ತರ ಹಿಮಾಲಯದಲ್ಲಿ ವಾಸಿಸುತ್ತವೆ.
ಈ ಲಂಗೊರ್ ಗಳ ಬಣ್ಣ ಗ್ರೇ(ಬೂದ್ ಬಣ್ಣ)ವಾಗಿದ್ದು ಮುಖ ಹಾಗೂ ಕಿವಿಯು ಕಪ್ಪು ಬಣ್ಣವಾಗಿರುತ್ತದೆ. ಕೆಲವು ಬೇರೆ ವರ್ಗಗಳಲ್ಲಿ ಕೈ ಹಾಗೂ ಕಾಲುಗಳ ಬಣ್ಣವು ಸ್ವಲ್ಪ ಗಾಢವಾದ ಬಣ್ಣ ಹೊಂದಿರುತ್ತದೆ. ಗಂಡು, ಹೆಣ್ಣು ಲಂಗೊರ್ ಗಳ ಅಳತೆ ಭಿನ್ನವಾಗಿರುತ್ತದೆ. ಗಂಡು ಲಂಗೊರ್ ಗಳು ಯಾವಾಗಲೂ ಹೆಣ್ಣಿಗಿಂತ ದೊಡ್ಡದಾಗಿರುತ್ತದೆ. ತಲೆ ಹಾಗೂ ದೇಹದ ಉದ್ದ 51 ರಿಂದ 79 ಸೆಂ.ಮೀ ಯಾವಾಗಲೂ ಇದರ ದೇಹಕ್ಕಿಂತ ಬಾಲವು ಉದ್ದವಾಗಿರುತ್ತದೆ. ಉತ್ತರದ ಭಾಗದ ಲಂಗೊರ್ ಗಳು 18 ಕೆ.ಜಿ, ಹೆಣ್ಣು ಲಂಗೊರ್ ಗಳು 11 ಕೆ.ಜಿ.ಯಿರುತ್ತದೆ. ಒಂದು ಸಲ ಮಾತ್ರ ನೇಪಾಳದ ಗ್ರೇ ಗಂಡು ಲಂಗೊರ್ 26.5 ಕೆ.ಜಿ ತೂಕವಿರುವುದು ದಾಖಲೆಯಿಂದ ತಿಳಿದುಬಂದಿದೆ.
ಲಂಗೊರ್ ಗಳು ಸಾಮಾನ್ಯವಾಗಿ ನಾಲ್ಕು ಕಾಲುಗಳಲ್ಲಿ ನಡೆಯುತ್ತವೆ. ಜಾಸ್ತಿ ವೇಳೆಯಲ್ಲಿ ನೆಲದ ಮೇಲೆಯೇ ಕಳೆಯುತ್ತದೆ. ಸ್ವಲ್ಪ ಕಾಲ ಮರಗಳ ಮೇಲೂ ಕಳೆಯುತ್ತದೆ. ಕೆಲವೊಮ್ಮೆ ಎರಡು ಕಾಲುಗಳಿಂದ ಎಗರುತ್ತಾ, ಹತ್ತುತ್ತಾ, ಇಳಿಯುತ್ತಾ ಇರುತ್ತವೆ. ಲಂಗೊರ್ ಗಳು 3.7-4.6 ಮೀಟರ್ ಅಡ್ಡವಾಗಿಯೂ 10.7-12.2 ಮೀಟರ್ ರಷ್ಟು ತಲೆಕೆಳಗಾಗಿಯೂ ನೆಗೆಯಬಲ್ಲವು.
ಗ್ರೇ ಲಂಗೊರ್ ಗಳು ಬೆಳಗಿನ ಹೊತ್ತು ಎಚ್ಚರವಾಗಿದ್ದು, ರಾತ್ರಿಯ ವೇಳೆ ಮರಗಳಲ್ಲಿ ಹಾಗೂ ಮಾನವ ನಿರ್ಮಿತ ವಿದ್ಯುತ್ ಕಂಬಗಳು, ಗೋಪುರಗಳ ಮೇಲೆ ಮಲಗುತ್ತವೆ.