ಮಂಗಳೂರು : ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಜಿಲ್ಲೆಯಲ್ಲಿ ಸಾಲ ಮರುಪಾವತಿ ಅಭಿಯಾನ ಆರಂಭಗೊಂಡಿದೆ. ಸಾಲ ಮರುಪಾವತಿಗೆ ಬಾಕಿ ಇರುವ ಫಲಾನುಭವಿಗಳು ನಿಗದಿ ಪಡಿಸಿರುವ ದಿನದಂದು ಮಾಹಿತಿ ಕೇಂದ್ರ ಅಥವಾ ಜಿಲ್ಲಾ ಕಚೇರಿಯಲ್ಲಿ ಪಾವತಿಸಲು ಕೋರಲಾಗಿದೆ. ಪ್ರತಿ ತಿಂಗಳ ನಾಲ್ಕರಂದು ಬಂಟ್ವಾಳ ತಾಲೂಕಿನ ಬಿ ಸಿ ರೋಡ್ ನಲ್ಲಿರುವ ಭಾರತ್ ಕಮರ್ಷಿಯಲ್ ಕಾಂಪ್ಲೆಕ್ಸ್ ನ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರದಲ್ಲಿ, ಪ್ರತಿ ತಿಂಗಳ ಏಳರಂದು ವಿಟ್ಲದ ಪ್ರವಾಸಿ ಮಂದಿರದಲ್ಲಿ, ಪ್ರತಿ ತಿಂಗಳ ಹತ್ತರಂದು ಬೆಳ್ತಂಗಡಿ ತಾಲೂಕಿನ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಕಟ್ಟಡದಲ್ಲಿರುವ ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರದಲ್ಲಿ, ಪ್ರತಿ ತಿಂಗಳ 15ರಂದು ಕಡಬ ತಾಲೂಕಿನ ಆಡಳಿತ ಕಚೇರಿಯಲ್ಲಿ, ಪ್ರತಿ ತಿಂಗಳ 15ರಂದು ಸುಳ್ಯ ತಾಲೂಕಿನ ಕೆಸಿ ರಸ್ತೆಯಲ್ಲಿರುವ ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರದಲ್ಲಿ, ಪ್ರತಿ ತಿಂಗಳ 20ರಂದು ಪುತ್ತೂರು ತಾಲೂಕಿನ ತಾಲೂಕು ಪಂಚಾಯತ್ ಕಟ್ಟಡದ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರದಲ್ಲಿ, ಪ್ರತಿ ತಿಂಗಳ 22 ರಂದು ಉಳ್ಳಾಲದ ಪುರಸಭೆಯಲ್ಲಿ, ಪ್ರತಿ ತಿಂಗಳ 25ರಂದು ಮೂಡಬಿದ್ರೆಯ ತಾಲೂಕು ಪಂಚಾಯತ್ ಹತ್ತಿರದ ಪ್ರವಾಸಿ ಮಂದಿರದಲ್ಲಿ ಮತ್ತು ಪ್ರತಿ ತಿಂಗಳ 28ರಂದು ಮೂಲ್ಕಿಯ ನಗರಸಭೆ ಕಾರ್ನಾಡಿನಲ್ಲಿ ಪಾವತಿಸಲು ಸೂಚಿಸಲಾಗಿದೆ.