ಮಂಗಳೂರು (ಬೆಂಗಳೂರು): ರಾಜ್ಯ ಸರಕಾರವು ವಿಧಾನಸಭೆಯಲ್ಲಿ ಕರ್ನಾಟಕ ಭೂಕಂದಾಯ ತಿದ್ದುಪಡಿ ವಿಧೇಯಕ 2023 ಕ್ಕೆ ಒಪ್ಪಿಗೆ ನೀಡಲಾಗಿದ್ದು ಸದನದಲ್ಲಿ ವಿಧೇಯಕ ಪರ್ಯಾಲೋಚನೆ ಮಂಡಿಸಲಾಗಿದೆ.
ಸಚಿವ ಕೃಷ್ಣ ಬೈರೇಗೌಡ ರಾಜ್ಯ ಸರ್ಕಾರದ ಮಾಸ್ಟರ್ ಪ್ಲಾನ್ ಅಸ್ತಿತ್ವದಲ್ಲಿರುವ ಪ್ರದೇಶಗಳಲ್ಲಿ ಪ್ರತ್ಯೇಕವಾಗಿ ಭೂ ಬಳಕೆ ಪರಿವರ್ತನೆ ತೆಗೆದುಕೊಳ್ಳುವ ಅಗತ್ಯವಿಲ್ಲ. ಮಹತ್ವದ ಅಂಶವುಳ್ಳ ಕರ್ನಾಟಕ ಭೂಕಂದಾಯ ತಿದ್ದುಪಡಿ ವಿಧೇಯಕ 2023 ರನ್ನು ಮಂಡಿಸಿದ್ದಾರೆ. ರಾಜ್ಯ ಸರಕಾರವು ಮಾಸ್ಟರ್ ಪ್ಲಾನ್ ನಲ್ಲಿ ಯಾವ ಯಾವ ಭೂಮಿ ಕೈಗಾರಿಕೆಗೆ ಶಾಲೆ ಉದ್ದಿಮೆ ವಸತಿ ಹೀಗೆ ಯಾವ್ಯಾವ ಬಳಕೆಗೆ ಬಳಸಬೇಕು ಎಂಬುದನ್ನು ವರ್ಗೀಕರಿಸಿದೆ. ಹಳದಿ ವಲಯದಲ್ಲಿ ಬರುವ ಜಾಗದಲ್ಲಿ ಮತ್ತೆ ವಸತಿ ಬಳಕೆಗೆ ಭೂ ಪರಿವರ್ತನೆ ಪಡೆಯುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.