ಮಂಗಳೂರು(ಬಂಟ್ವಾಳ): ಸುಮಾರು 20 ವರ್ಷಗಳ ಹಿಂದೆ ದಿ. ಅಹಮ್ಮದ್ ಹಾಜಿ ಮೈಯುದ್ದೀನ್ ಅವರಿಂದ ಸ್ಥಾಪಿಸಲ್ಪಟ್ಟ ತುಂಬೆ ಬಿ.ಎ ಕೈಗಾರಿಕಾ ತರಬೇತಿ ಸಂಸ್ಥೆ ಬಹಳಷ್ಟು ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಿನ ಆಶಾ ಕಿರಣವಾಗಿದೆ. ಸಂಸ್ಥೆಯಲ್ಲಿ ಎಸಿ ಮ್ಯಕಾನಿಕ್, ಇಲೆಕ್ಟಾನಿಕ್ ಮ್ಯಕಾನಿಕ್, ಡಿಸೆಲ್ ಮ್ಯಕಾನಿಕ್, ವೆಲ್ಡರ್ ತರಬೇತಿಯನ್ನು ನೀಡಲಾಗುತ್ತಿದ್ದು, ತರಬೇತಿಯು 1 ಮತ್ತು 2 ವರ್ಷ ಅವಧಿಯದ್ದಾಗಿರುತ್ತದೆ.
ತರಬೇತಿ ಪೂರ್ಣಗೊಂಡ ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದ ಮೂಲಕ ವಿವಿಧ ಉದ್ಯೋಗದಲ್ಲಿ ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ತಮ್ಮ ವೃತ್ತಿಜೀವನವನ್ನು ನಡೆಸುತ್ತಿದ್ದಾರೆ. ಪ್ರಮುಖವಾಗಿ ಟೊಯೋಟ, ಬಾಷ್, ಜಿನೀಯಸ್ ಎರ್ ಕೋನ್, ಶೀತಲ್, ಶೇಡ್ ಮೆನ್ಯುಪಾಕ್ಚರರ್, ಹುಂಡೈ ಮೊದಲಾದ ಬಹುರಾಷ್ಟ್ರೀಯ ಕಂಪೆನಿಗಳು ವಿದ್ಯಾರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿರುತ್ತಾರೆ. ಈಗಾಗಲೇ ಸಂಸ್ಥೆಯ ಬಹಳಷ್ಟು ವಿದ್ಯಾರ್ಥಿಗಳು ವಿದೇಶಗಳಲ್ಲಿ ತಮ್ಮ ವೃತ್ತಿಜೀವನ ನಡೆಸುತ್ತಿದ್ದಾರೆ. ಶೇಕಡಾ 100 ಉದ್ಯೋಗ ಮತ್ತು ಫಲಿತಾಂಶ ಬರುತ್ತಿರುವುದು ಸಂಸ್ಥೆಯಲ್ಲಿ ತರಬೇತಿ ಕಾರ್ಯಕ್ರಮ ಕೈಗೊಳ್ಳುವ ಶಿಕ್ಷಕರ ಶ್ರಮದ ಫಲವಾಗಿದೆ.
ವಿದ್ಯಾರ್ಥಿಗಳಿಗೆ ಸರಕಾರದಿಂದ ಕೊಡಲಾಗುವ ಎಲ್ಲಾ ತರದ ವಿದ್ಯಾರ್ಥಿ ವೇತನಗಳು, ಮುಖ್ಯವಾಗಿ ಪೋಸ್ಟ್ ಮೆಟ್ರಿಕ್, ಕಟ್ಟಡ ಕಾರ್ಮಿಕ, ಬೀಡಿ ಕಾರ್ಮಿಕ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ, ವಿದ್ಯಾಸಿರಿ, ರೈತರ ಮಕ್ಕಳಿಗೆ ಸಿಗುವ ವಿದ್ಯಾನಿಧಿ ಹೀಗೆ ಕೆಲವಷ್ಟು ವಿದ್ಯಾರ್ಥಿ ವೇತನವನ್ನು ಪಡೆಯಲು ಕಾಲೇಜಿನ ಮೂಲಕ ವ್ಯವಸ್ಥೆ ಮಾಡಲಾಗಿದೆ. ಸರಕಾರದಿಂದ ದೊರೆಯುವ ಹಾಸ್ಟೆಲ್ ವ್ಯವಸ್ಥೆ ಮತ್ತು ಕೆಎಸ್ಆರ್ಟಿಸಿ ಬಸ್ ಪಾಸ್ ಎಂಬಿತ್ಯಾದಿ ಅನುಕೂಲಗಳನ್ನು ಪಡೆಯಲು ಕಾಲೇಜಿನಲ್ಲೆ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಡ್ರೈವಿಂಗ್ ಸ್ಕೂಲ್, ಪಾನ್ ಕಾರ್ಡ್, ಪಾಸ್ ಪೋರ್ಟ್ ಒದಗಿಸಲು ಕಾಲೇಜಿನಲ್ಲಿ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ. ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಮಾಹಿತಿ ನೀಡಿ ಅವರನ್ನು ಪ್ರೋತ್ಸಾಹಿಸಲಾಗುತ್ತಿದೆ.
ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಎನ್ ಎಸ್ ಎಸ್, ಪರಿಸರ ಕಾಳಜಿ, ಪ್ರತಿ ಶನಿವಾರ ಮಕ್ಕಳಿಂದಲೇ ತಯಾರಿಸಲ್ಪಡುವ ಊಟ, ಉಪಹಾರ ಹೀಗೆ ಅವರ ಜೀವನ ಕೌಶಲ್ಯವನ್ನು ವೃದ್ಧಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಒಟ್ಟಿನಲ್ಲಿ ಒಬ್ಬ ವಿದ್ಯಾರ್ಥಿಯು ಪರಿಪೂರ್ಣ ಜೀವನ ನಡೆಸಲು ಸಹಕಾರಿಯಾಗುವಂತೆ ಆಸಕ್ತಿ ವಹಿಸಲಾಗುತ್ತದೆ.
ಬಿ.ಎ ಕೈಗಾರಿಕಾ ತರಬೇತಿ ಸಂಸ್ಥೆಯು ಮೈಯುದ್ದೀನ್ ಎಜುಕೇಶನಲ್ ಟ್ರಸ್ಟ್ ತುಂಬೆ ಇದರ ಅಂಗ ಸಂಸ್ಥೆಯಾಗಿದ್ದು ಬಿ. ಅಬ್ದುಲ್ ಸಲಾಂ ಇವರ ನೇತೃತ್ವದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. 2023-24ನೇ ಸಾಲಿನ ಪ್ರವೇಶಾತಿ ಪ್ರಾರಂಭಗೊಂಡಿದ್ದು ಆಸಕ್ತಿ ಇರುವ ವಿದ್ಯಾರ್ಥಿಗಳು ಕಾಲೇಜಿನ ಪ್ರಾಂಶುಪಾಲ ನವೀನ್ ಕುಮಾರ್ ಕೆ.ಎಸ್. (ಮೊ. 9449639916) ಅವರನ್ನು ಸಂಪರ್ಕಿಸಲು ಕೋರಲಾಗಿದೆ. ಹತ್ತನೇ ತರಗತಿಯಲ್ಲಿ ಅನುತೀರ್ಣಗೊಂಡ ವಿದ್ಯಾರ್ಥಿಗಳಿಗೂ ಸಂಸ್ಥೆಯಲ್ಲಿ ತರಬೇತಿಯನ್ನು ಪಡೆಯಬಹುದಾಗಿದೆ.