ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯಿಂದ 57ನೇ ಸೇವಾ ಕಾರ್ಯ

ಮಂಗಳೂರು(ಮಂಜೇಶ್ವರ): ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯ “ಬಡವು” ಯೋಜನೆಯ 57ನೇ ಸೇವಾ ಕಾರ್ಯವು ಉಪ್ಪಳ ಸಮೀಪದ ಪೈವಳಿಕೆ ಲಾಲ್‌‌ಬಾಗ್ ಬೋಳಂಗಳ ನಿವಾಸಿ ಕಲ್ಯಾಣಿ ಕೃಷ್ಣ ದಂಪತಿಗಳ ಕುಟುಂಬಕ್ಕೆ ದೈನಂದಿನ ದಿನಸಿ ಸಾಮಾಗ್ರಿಗಳನ್ನು ಹಸ್ತಾಂತರಿಸುವ ಮೂಲಕ ಜರಗಿತು.

ಮುಪ್ಪಿನ ಕಾಲದಲ್ಲಿ ದುಡಿದು ಸಾಕಬೇಕಾದ ಮಕ್ಕಳ ಅನಾರೋಗ್ಯ ಒಂದೆಡೆಯಾದರೆ ಮತ್ತೊಂದೆಡೆ ದಂಪತಿಗಳು ವಾಸವಿರುವ ಮನೆಯು ಶೋಚನಿಯ ಸ್ಥಿತಿಯಲ್ಲಿದೆ. ಅನಾರೋಗ್ಯ, ಮನೆ ಖರ್ಚು, ಚಿಕಿತ್ಸಾ ವೆಚ್ಚವನ್ನು ಭರಿಸಲಾಗದೆ ಆರ್ಥಿಕವಾಗಿ ಸಂಕಷ್ಟ ಅನುಭವಿಸುತ್ತಿರುವ ಕಲ್ಯಾಣಿ ಕೃಷ್ಣ ದಂಪತಿಗಳಿಗೆ ಸಂಸ್ಥೆಯ ಬಡವು ಯೋಜನೆಯಡಿ ದಿನಸಿ ಸಾಮಾಗ್ರಿಗಳನ್ನು ಹಸ್ತಾಂತರಿಸುವ ಮೂಲಕ ಟೀಮ್‌ ಮಂಜುಶ್ರೀ ಮತ್ತೊಮ್ಮೆ ಮಾನವೀಯತೆಯನ್ನು ಮೆರೆದಿದೆ.

ದಿನಸಿ ಸಾಮಾಗ್ರಿ ಹಸ್ತಾಂತರಿಸುವ ಸಂದರ್ಭದಲ್ಲಿ ಸಾಯಂಜನಿ ಯುವ ಬಳಗ ಸಂಸ್ಥಾಪಕ ರಂಜಿತ್ ಕುಮಾರ್, ಅಧ್ಯಕ್ಷ ಅಜಯ್ ರಾಜ್ ಉಪ್ಪಳ, ಸದಸ್ಯರಾದ ನವೀನ್ ಗುರಿಕಾರ, ನವೀನ್, ಸಂಸ್ಥೆಯ ಗೌರವಾಧ್ಯಕ್ಷ ಸದಾಶಿವ ಹೊಸಬೆಟ್ಟು, ಸಂಸ್ಥಾಪಕ ಮತ್ತು ರಾಜ್ಯ ಘಟಕದ ಸಲಹೆಗಾರ ಬಾಲಚಂದ್ರ ಶೆಟ್ಟಿ ಸೋಮೇಶ್ವರ, ಸ್ಥಾಪಕಾಧ್ಯಕ್ಷ ಮನೋಜ್ ಕುಲಾಲ್ ಕೊಡಕ್ಕಲ್, ಸಂಸ್ಥಾಪಕ ಮತ್ತು ರಾಜ್ಯಾಧ್ಯಕ್ಷ ವಂಶಿ ಪಂಡಿತ್ ಕಣ್ಣೂರು, ಸಂಸ್ಥಾಪಕ ಮತ್ತು ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಸಚಿನ್ ಜಿ ಮಣೇಲ್‌ಬೈಲ್, ರಾಜ್ಯ ಸಮಿತಿ ಸದಸ್ಯರಾದ ಶರಣ್ ಜಿ ಮಣೇಲ್‌ಬೈಲ್, ರಮೇಶ್ ಕುಲಾಲ್ ನಾರಾಯಣ ಮಂಗಲ, ಮಹಿಳಾ ಘಟಕದ ಸದಸ್ಯರಾದ ಅಮಿತಾ ಶೆಟ್ಟಿ, ಬಬಿತಾ ಶೆಟ್ಟಿ, ಪೂರ್ಣಿಮ ರಾವ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here