ಪ್ರಾಣಿ ಪ್ರಪಂಚ-40

ಕೆಂಪು ಪಾಂಡ (Ailurus fulgens)

ಮಕ್ಕಳಿಗಾಗಿ ವಿಶೇಷ ಮಾಹಿತಿ

ಇದು ಕರಡಿಯಂತಿರುವ ಕೆಂಪುಬೆಕ್ಕಾಗಿದೆ. ಈ ಬೆಕ್ಕು ಮರಗಳನ್ನು ಆಶ್ರಯಿಸಿರುವ ಸಸ್ತನಿಯಾಗಿದೆ. ಹಿಮಾಲಯ, ದಕ್ಷಿಣ ಪಶ್ಚಿಮ ಚೀನಾಗಳಲ್ಲಿ ಇದು ಕಂಡುಬರುತ್ತದೆ. ಇದೊಂದು ವಿಶಿಷ್ಟ ಜೀವಿಯಾಗಿದೆ. ಸಾಮಾನ್ಯ ಬೆಕ್ಕುಗಳಿಗಿಂತ ಆಕಾರದಲ್ಲಿ ಸ್ವಲ್ಪ ದೊಡ್ಡದಾಗಿದೆ. ಇವುಗಳಿಗೆ ನಸುಕೆಂಪಿನಿಂದ ಕೂಡಿದ ಕಂದು ಬಣ್ಣದ ದಟ್ಟ ಕೂದಲುಗಳಿದ್ದು ಬಾಲವು ಉದ್ದ ಕೂದಲುಗಳಿಂದ ಕೂಡಿದೆ.
ಮುಂಗಾಲುಗಳು ಚಿಕ್ಕವಾದ್ದರಿಂದ ಇದು ತೂರಾಡುತ್ತ ನಡೆಯುತ್ತದೆ, ಈ ಬೆಕ್ಕುಗಳ ಆಹಾರವು ಬಿದಿರು, ಮೊಟ್ಟೆಗಳು, ಪಕ್ಷಿಗಳು, ಕೀಟಗಳು ಹಾಗೂ ಚಿಕ್ಕ ಸಸ್ತನಿಗಳು. ಇವುಗಳು ರಾತ್ರಿಯಲ್ಲಿ ಕ್ರಿಯಾಶೀಲವಾಗಿದ್ದು ಹಗಲಿನಲ್ಲಿ ಜಡವಾಗಿರುತ್ತವೆ. ಕೆಂಪು ಬೆಕ್ಕುಗಳು ಸಮಶೀತೋಷ್ಣ ಹವಾಮಾನದಲ್ಲಿ ವಾಸಿಸುತ್ತವೆ. ಹಿಮಾಲಯದ ಕಾಡುಗಳಲ್ಲಿ, ನೇಪಾಳ, ಟಿಬೆಟ್‌, ಚೀನಾ, ಸಿಕ್ಕಿಂ, ಅಸ್ಸಾಂ,‌ ಭೂತಾನ, ಬರ್ಮಾಗಳಲ್ಲಿ ಕಂಡುಬರುತ್ತದೆ. ಮರ ಹತ್ತುವದರಲ್ಲಿ ಇವು ನಿಷ್ಣಾವಾಗಿವೆ, ಹೆಣ್ಣು ಬೆಕ್ಕುಗಳು 10ನೇ ತಿಂಗಳಲ್ಲಿ ಗರ್ಭಧರಿಸುತ್ತವೆ. ಇವುಗಳ ಸರಾಸರಿ ವಯಸ್ಸು 8 ರಿಂದ 10 ವರುಷಗಳು. ಕೆಂಪು ಬೆಕ್ಕು ನೋಡಲು ಆಕರ್ಷಕ ಪ್ರಾಣಿಯಾಗಿದೆ. ಈ ಬೆಕ್ಕು ಸಿಕ್ಕಿಂನ “ರಾಜ್ಯದ ಪ್ರಾಣಿ”ಯಾಗಿದೆ, ಅವುಗಳ ತುಪ್ಪಳಕ್ಕಾಗಿ ಅವುಗಳನ್ನು ಬೇಟೆಯಾಡುತ್ತಾರೆ.

LEAVE A REPLY

Please enter your comment!
Please enter your name here