ಮಂಗಳೂರು(ಒಕ್ಲಾಹೊಮ): ಮಾನವನಂತೆ ಹಲ್ಲುಗಳಿರುವ ಮೀನು ಅಮೆರಿಕಾದ ಒಕ್ಲಾಹೊಮದಲ್ಲಿ ಪತ್ತೆಯಾಗಿದೆ. ಈ ಮೀನಿನ ಫೋಟೋವನ್ನು ವನ್ಯಜೀವಿ ಸಂರಕ್ಷಣಾ ಇಲಾಖೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ. ಹಲವು ಮಂದಿ ಈ ಕುರಿತು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಪಾಕು ಕುಟುಂಬಕ್ಕೆ ಸೇರಿದ ಈ ಮೀನಿನ ಮೂಲ ದಕ್ಷಿಣ ಆಫ್ರಿಕಾ. 3.5 ಅಡಿ ಉದ್ದ, 88 ಪೌಂಡ್ಸ್ ತೂಕ ಇರುವ ಇವು ಸಸ್ಯಾಹಾರಿ. ಮನುಷ್ಯರಿಗೆ ಯಾವುದೇ ಹಾನಿ ಮಾಡುವುದಿಲ್ಲ. ಸಾಮಾನ್ಯವಾಗಿ ಪಾಕು ಪ್ರಬೇಧದ ಮೀನುಗಳು ಸ್ಥಳೀಯ ಪರಿಸರ ವ್ಯವಸ್ಥೆಗೆ ಹಾನಿಯುಂಟು ಮಾಡುವ ಆಕ್ರಮಣಕಾರಿ ಸ್ವಭಾವ ಹೊಂದಿರುತ್ತವೆ ಎಂದು ಇಲಾಖೆ ತಿಳಿಸಿದೆ.