‘ಇಂಡಿಯಾ’ ಹೆಸರು ತೆಗೆದು ಹಾಕಿ, ಅದು ಗುಲಾಮಗಿರಿ ಸಂಕೇತ – ಬಿಜೆಪಿ ಸಂಸದ ನರೇಶ್ ಬನ್ಸಾಲ್ ಒತ್ತಾಯ

    ಮಂಗಳೂರು(ನವದೆಹಲಿ): ‘ದೇಶಕ್ಕೆ ಇಂಡಿಯಾ ಎಂಬ ಹೆಸರು ಬೇಡ. ಸಂವಿಧಾನದಲ್ಲಿ ಇಂಡಿಯಾ ಎಂಬ ಹೆಸರನ್ನು ತೆಗೆಯಬೇಕು. ಅದು ವಸಾಹತುಶಾಹಿ ಗುಲಾಮಗಿರಿ ಸಂಕೇತ’ ಎಂದು ರಾಜ್ಯಸಭೆ ಬಿಜೆಪಿ ಸದಸ್ಯ ನರೇಶ್ ಬನ್ಸಾಲ್ ಆಗ್ರಹಿಸಿದ್ದಾರೆ.

    ಶುಕ್ರವಾರ ರಾಜ್ಯಸಭೆ ಚರ್ಚೆಯಲ್ಲಿ ಮಾತನಾಡಿದ ಅವರು, ‘ಇಂಡಿಯಾ ಎಂಬುದು ಬ್ರಿಟಿಷ್ ಸಾಮ್ರಾಜ್ಯದಲ್ಲಿ ಪ್ರಖರತೆ ಪಡೆದುಕೊಂಡು ಹೆಸರಾಗಿದೆ. ನಮ್ಮ ದೇಶಕ್ಕೆ ಭಾರತ ಎಂಬ ಹೆಸರು ಸಹಸ್ರಾರು ವರ್ಷಗಳಿಂದ ಇದೆ. ಇಂಡಿಯಾವನ್ನು ಅಧಿಕೃತವಾಗಿ ಭಾರತ ಎಂದು ಹೆಸರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

    ಶ್ರೀಮಂತ ಪರಂಪರೆಯನ್ನು ಹೊಂದಿರುವ ಭಾರತಕ್ಕೆ ಇಂಡಿಯಾ ಎಂಬ ಹೆಸರು ಗುಲಾಮಗಿರಿಯ ಸಂಕೇತವೇ ಹೊರತು ಮತ್ತೇನೂ ಎಲ್ಲ ಎಂದು ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ‘ಇಂಡಿಯಾವನ್ನು ತೆಗೆದುಹಾಕಿ ಭಾರತ ಎಂದು ಪುನರ್‌ನಾಮಕರಣ ಮಾಡುವುದು ಮಹತ್ವದ ಮೈಲುಗಲ್ಲಾಗುತ್ತದೆ. ನಮ್ಮ ಸ್ವಾಭಿಮಾನವನ್ನು ಎತ್ತಿ ಹಿಡಿಯುತ್ತದೆ’ ಎಂದು ಬನ್ಸಾಲ್ ಹೇಳಿದ್ದಾರೆ.

    ಇತ್ತೀಚೆಗೆ ವಿರೋಧ ಪಕ್ಷಗಳು ತಮ್ಮ ಒಕ್ಕೂಟಕ್ಕೆ ಇಂಡಿಯಾ ಎಂದು ನಾಮಕರಣ ಮಾಡಿವೆ. ಈ ನಡೆ ಎನ್‌ಡಿಎ ಒಕ್ಕೂಟವನ್ನು ಕೆರಳಿಸುಂತೆ ಮಾಡಿದೆ. ನರೇಶ್‌ ಬನ್ಸಾಲ್ ಅವರು ಉತ್ತರಾಖಂಡ ರಾಜ್ಯದಿಂದ ರಾಜ್ಯಸಭೆ ಸಂಸದರಾಗಿದ್ದು, ಅಲ್ಲಿನ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದರು.

    LEAVE A REPLY

    Please enter your comment!
    Please enter your name here