ಮಂಗಳೂರು(ಅರ್ಜೆಂಟೀನಾ): ಒಂದು ವಾರದಿಂದ ಕಾಣೆಯಾಗಿದ್ದ ಅರ್ಜೆಂಟೀನಾದ ಕ್ರಿಪ್ಟೊ ಕರೆನ್ಸಿ ವ್ಯವಹಾರದಲ್ಲಿ ತೊಡಗಿದ್ದ ಬಿಲಿಯನೇರ್ ಫರ್ನಾಂಡೋ ಪೆರೆಜ್ ಅಲ್ಗಾಬಾ ಶವವಾಗಿ ಪತ್ತೆಯಾಗಿದ್ದಾರೆ. ರಾಜಧಾನಿ ಬ್ಯೂನಸ್ ಐರಿಸ್‌ನ ಸ್ಟ್ರೀಮ್ ಬಳಿ ಸೂಟ್‌ಕೇಸ್‌ನಲ್ಲಿ ಅಲ್ಗಾಬಾ ಅವರ ದೇಹದ ಭಾಗಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿರುವುದಾಗಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಮಕ್ಕಳ ಗುಂಪೊಂದು ಆಟವಾಡುವ ವೇಳೆ ಸೂಟ್ ಕೇಸ್‌ನಲ್ಲಿ ದೇಹದ ಭಾಗಗಳಿರುವುದನ್ನು ಕಂಡಿದ್ದು, ಮಕ್ಕಳ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ದೇಹದ ಭಾಗಗಳಲ್ಲಿನ ಬೆರಳಚ್ಚು ಮತ್ತು ಟ್ಯಾಟೂಗಳ ಮೂಲಕ ಅಲ್ಗಾಬಾ ಎಂದು ಗುರುತು ಹಿಡಿಯಲಾಗಿದೆ. ಸೂಟ್‌ಕೇಸ್‌ನಲ್ಲಿ ಕಾಲು ಮತ್ತು ಮುಂಗೈ ಭಾಗಗಳು ಕಂಡುಬಂದಿದ್ದು, ಇನ್ನೊಂದು ತೋಳು ಹೊಳೆಯೊಂದರಲ್ಲಿ ಪತ್ತೆಯಾಗಿದೆ.
ದೇಹದ ಭಾಗಗಳನ್ನು ಸಂಪೂರ್ಣವಾಗಿ ಕತ್ತರಿಸಲಾಗಿದೆ. ಅದಕ್ಕೂ ಮೊದಲು ಅವರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ ಎಂದು ಮರಣೋತ್ತರ ಪರೀಕ್ಷೆ ವೇಳೆ ಬಹಿರಂಗವಾಗಿದೆ. ಬಾರ್ಸಿಲೋನಾ ಮೂಲದ ಅಲ್ಗಾಬಾ ಅವರು ಕೊಲೆಯಾಗುವ ವಾರದ ಹಿಂದೆ ಅರ್ಜೆಂಟೀನಾಕ್ಕೆ ಬಂದು ಅಪಾರ್ಟ್ಮೆಂಟ್‌ನಲ್ಲಿ ನೆಲೆಸಿದ್ದರು. ಜುಲೈ 19 ರಂದು ಕೀ ನೀಡಲು ಬರದ ಕಾರಣ ಅಪಾರ್ಟ್ಮೆಂಟ್ ಮಾಲೀಕರು ದೂರು ದಾಖಲಿಸಿದ್ದರು. ಈ ಸಂಬಂಧ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.
NEWS: Crypto tycoon, Fernando Pérez Algaba, found dismembered in a suitcase.
The horrifying scene was stumbled upon by two children playing football.
Fernando had been reported missing four days prior. The investigation into this mysterious and brutal incident is underway. RIP pic.twitter.com/dINNJheXz1
— CryptoSavingExpert ® (@CryptoSavingExp) July 27, 2023