ಕಾಸರಗೋಡು – ಮನೆಯ ಶೆಡ್ ನಲ್ಲಿ ತಿಮಿಂಗಿಲದ ಅಸ್ತಿಪಂಜರ ಪತ್ತೆ

ಮಂಗಳೂರು (ಕಾಸರಗೋಡು): 15 ವರ್ಷಗಳಷ್ಟು ಹಳೆಯದಾದ ತಿಮಿಂಗಿಲದ ಅಸ್ತಿಪಂಜರವು ಮಂಜೇಶ್ವರ ಸಮೀಪದ ಮನೆಯೊಂದರ ಶೆಡ್ ನಲ್ಲಿ ಪತ್ತೆಯಾಗಿದೆ.

ಮಂಜೇಶ್ವರ ಕಣ್ವ ತೀರ್ಥದ ಕರ್ನಾಟಕ ಮೂಲದ ವ್ಯಕ್ತಿಯೋರ್ವರ ಮಾಲಕತ್ವದ ಸುಮಾರು 15 ಎಕರೆಯಷ್ಟು ಸ್ಥಳವೊಂದರ ಶೆಡ್ ನಿಂದ ಕಾಸರಗೋಡು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಸ್ತಿಪಂಜರದ ಅವಶೇಷಗಳನ್ನು ಡಿಎನ್ಎ ಪರೀಕ್ಷೆಗಳ ಪಡಿಸಲಾಗುವುದು ಎಂದು ಅರಣ್ಯ ವಲಯ ಅಧಿಕಾರಿ ತಿಳಿಸಿದ್ದಾರೆ. ವರದಿ ಲಭಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here