ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್ – ಕೇರಳ ಮೂಲದ ಯುವಕರಿಂದ ಕೃತ್ಯ

ಮಂಗಳೂರು(ಬಂಟ್ವಾಳ): ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವುದಾಗಿ ನಂಬಿಸಿ ಗ್ಯಾಂಪ್ ರೇಪ್ ನಡೆಸಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೆರುವಾಯಿ ಗ್ರಾಮದ 16 ವರ್ಷ ಪ್ರಾಯದ ಬಾಲಕಿ ಕೇರಳ ಭಾಗದ ಕೆಲವು ಯುವಕರಿಂದ ಹಲವು ಸಮಯದಿಂದ ನಿರಂತರ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೇಳಲಾಗಿದೆ. ಶನಿವಾರ ವಿಟ್ಲ ಠಾಣೆಗೆ ಆಗಮಿಸಿದ ದಲಿತ ಬಾಲಕಿಯ ಪೋಷಕರು ಘಟನೆಯ ಬಗ್ಗೆ ಕೇರಳ ಮೂಲದ ಕೆಲವು ಯುವಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ವಿಟ್ಲ ಠಾಣೆಯಲ್ಲಿ ಪೊಕ್ಸೋ ಪ್ರಕರಣ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರ ತನಿಖೆಯಿಂದ ಇನ್ನಷ್ಟು ಮಾಹಿತಿ ತಿಳಿದುಬರಬೇಕಿದೆ.

LEAVE A REPLY

Please enter your comment!
Please enter your name here