ಆಲಿನ್ ರಿಟ್ಲ್ ಆಮೆ (Lepidochelys olivacea)
ಮಕ್ಕಳಿಗಾಗಿ ವಿಶೇಷ ಮಾಹಿತಿ
ಸಮುದ್ರ ಆನೆಯ ಒಂದು ಪ್ರಭೇದ. 25-50 ಗ್ರಾಂ ತೂಕ ಹೊಂದಿರುತ್ತದೆ. ಗಂಡು-33 ಕೆ.ಜಿ., ಹೆಣ್ಣು-35 ಕೆ.ಜಿ., ಮರಿಗಳು 12-23.3 ಗ್ರಾಂಗಳು. ಅಗಲ ತ್ರಿಕೋಣಾಕಾರದ ತಲೆ ಹೊಂದಿದ್ದು ಬೆನ್ನ ಮೇಲೆ ಹೃದಯಾಕಾರದ ದಪ್ಪ ಚಿಪ್ಪನ್ನು ಹೊಂದಿರುತ್ತದೆ. ಇದು (60-7 ಸೆ.ಮೀ) ಇರುತ್ತದೆ.
ವಯಸ್ಕ ಪ್ರಬುದ್ಧ ಗಂಡು ಆಮೆಗಳಿಗೆ ಬೆನ್ನಿನ ಕಾರಪೇಸ್ ಅಥವಾ ಚಿಪ್ಪು ಉದ್ದ ಹಾಗೂ ಚೂಪಾಗಿರುತ್ತದೆ. ಜೊತೆಗೆ ಉದ್ದ ಹಾಗೂ ದಪ್ಪನೆಯ ಬಾಲವನ್ನು ಹೊಂದಿರುತ್ತದೆ. ಮುಂಭಾಗದ ಫ್ಲಿಪ್ಪಿರ್ ನ ಮೇಲಿರುವ ಉಗುರು ಚುರುಚಾಗಿ ಚೂಪಾಗಿ ಇರುತ್ತದೆ. ಇವೆಲ್ಲವೂ ಸಮಾಗಮಕ್ಕೆ ಸಹಕಾರಿಯಾಗಿರುತ್ತವೆ.
ಹುಟ್ಟಿರುವ ಆಮೆಯ ಮಕ್ಕಳು ಕಡು ಬೂದಿ ಬಣ್ಣದಾಗಿದ್ದು ಮೇಲೆ ತಿಳೀ ಹಳದಿ ಗುರುತನ್ನು ಹೊಂದಿರುತ್ತವೆ. ಪುಟ್ಟಮರಿಗಳ ಚಿಪ್ಪಿನ ಅಳತೆ 37-50 ಮಿ.ಮಿ. ಇರುತ್ತದೆ. ಚಿಪ್ಪು ಸಣ್ಣ ಬಿಳಿ ಬಣ್ಣದ ಅಂಚನ್ನು ಹೊಂದಿರುತ್ತದೆ.
ಆಮೆಯ ಮೇಲ್ಭಾಗವು ಬೂದು ಹಾಗೂ ಹಸಿರು ವರ್ಣ ಮಿಶ್ರಿತವಾಗಿದ್ದು ಕೆಲವೊಮ್ಮೆ ಆಲಿವ್ ಅಂದರೆ ಕಡುಹಸಿರು ಬಣ್ಣವೂ ಇರುತ್ತದೆ. ಕೆಲವೊಮ್ಮೆ ಚಿಪ್ಪಿನ ಮೇಲೆ, ಪಾಚಿ ಕಟ್ಟಿಕೊಳ್ಳುವುದರಿಂದ ಕೆಂಪುಬಣ್ಣವೂ ಕಾಣುತ್ತದೆ. ತೆವಳುವುದಕ್ಕೆ ಸಹಕಾರಿಯಾಗಿರುವ ಮುಂಗಾಲುಗಳು (ಫ್ಲಿಪ್ಪರ್ಗಳು) ಇದೆ. ಇದರ ಮೇಲ್ಭಾಗದಲ್ಲಿ 2 ಉಗುರುಗಳನ್ನು ಕಾಣಬಹುದು.