ಬಸ್‌ನಲ್ಲಿ ವಿದ್ಯಾರ್ಥಿನಿಯೊಂದಿಗೆ ಅಸಭ್ಯ ವರ್ತನೆ – ಆರೋಪಿಯ ಬಂಧನ

ಮಂಗಳೂರು(ಬೆಳ್ತಂಗಡಿ): ಮಂಗಳೂರಿನಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದ ಬಸ್‌ನಲ್ಲಿ ವಿದ್ಯಾರ್ಥಿನಿಯೊಂದಿಗೆ ಯುವಕನೋರ್ವ ಅಸಭ್ಯವಾಗಿ ನಡೆದುಕೊಂಡ ಘಟನೆ ಮಡಂತ್ಯಾರು ಸಮೀಪ ನಡೆದಿದ್ದು, ಇಂದಬೆಟ್ಟು ನಿವಾಸಿ ಕಬೀರ್ ಎಂಬಾತನನ್ನು ಬಂಧಿಸಲಾಗಿದೆ.

ಯುವತಿಯೊಬ್ಬಳು ಮಂಗಳೂರಿನಿಂದ ಚಿಕ್ಕಮಗಳೂರಿನ ಮೂಡಿಗೆರೆಗೆ ಕೆ.ಎಸ್.ಆರ್.ಟಿ.ಸಿ. ಬಸ್‌ನಲ್ಲಿ ತೆರಳುವ ವೇಳೆ ಮಂಗಳೂರಿನ ಜ್ಯೋತಿ ಸರ್ಕಲ್‌ ಬಳಿ ಬಸ್‌ ಏರಿದ ಕಬೀರ್ ಯುವತಿಯ ಪಕ್ಕ ಕುಳಿತಿದ್ದ. ಮಡಂತ್ಯಾರಿನಿಂದ ಸ್ವಲ್ಪ ಹಿಂದಕ್ಕೆ ತಲುಪಿದಾಗ ಆತನು ಯುವತಿ ಜತೆ ಅಸಭ್ಯವಾಗಿ ವರ್ತಿಸಿದ್ದಾನೆ. ಪ್ರತಿರೋಧ ವ್ಯಕ್ತ ಪಡಿಸಿದ ಯುವತಿ ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಓದುತ್ತಿದ್ದ ಸ್ನೇಹಿತರಿಗೆ ಮಾಹಿತಿ ನೀಡಿದ್ದಾಳೆ. ಅವರು ಯುವತಿ ಪೋಷಕರಿಗೆ ಮಾಹಿತಿ ನೀಡಿ ಉಜಿರೆಯ ಬಳಿ ಬಸ್‌ ಬಂದಾಗ ಆರೋಪಿಯನ್ನು ಬಸ್ ಚಾಲಕ ಮತ್ತು ನಿರ್ವಾಹಕರ ಸಹಾಯ ಪಡೆದು ಪೊಲೀಸರಿಗೊಪ್ಪಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here