ಪ್ರಾಣಿ ಪ್ರಪಂಚ-46

ನೀಲಗಿರಿ ಅಜಹರಣ (Nilgiritragus hylocrius)

ಮಕ್ಕಳಿಗಾಗಿ ವಿಶೇಷ ಮಾಹಿತಿ

ಪಶ್ಚಿಮ ಘಟ್ಟದ ದಕ್ಷಿಣದ ನೀಲಗಿರಿ ಬೆಟ್ಟಗಳಲ್ಲಿ, ದಕ್ಷಿಣ ಭಾರತದ ತಮಿಳುನಾಡು ಹಾಗೂ ಕೇರಳ ಪ್ರಾಂತ್ಯಗಳಲ್ಲಿ ಕಾಣಬಹುದು. ಅನ್ನಾಮಲೈ ಬೆಟ್ಟ, ಪಳನಿಬೆಟ್ಟ, ಎರವಿ ಕುಲವೆರ್‌, ಕೇರಳದ ತ್ರಿವಾಂಡ್ರಮ್‌ ಬಳಿಯಿರುವ ಪೊನ್‌ ಮುಡಿ ಬೆಟ್ಟದಲ್ಲಿ ಕಾಣಬಹುದು.

ಮೈಮೇಲೆ ದಟ್ಟ ಹೊದಿಕೆ, ದಟ್ಟ ರೋಮ ರಾಶಿ ಹೊಂದಿದ್ದು, ಪ್ರಬುದ್ಧ ಗಂಡು ಹೆಣ್ಣಿಗಿಂತ ಗಾಢ ಬಣ್ಣ ಹೊಂದಿರುತ್ತವೆ. ಗಂಡು ಹಾಗೂ ಹೆಣ್ಣಿಗೆ ತಿರುಚಾದ ಕೋಡುಗಳು ಇರುತ್ತದೆ. ಆದರೂ ಈ ಕೊಂಬುಗಳು ಗಂಡಿನಲ್ಲಿ 16 ಇಂಚುಗಳಷ್ಟು ಉದ್ದವಾಗಿರುತ್ತವೆ. ಹೆಣ್ಣಿನ ಕೊಂಬುಗಳು 12 ಇಂಚಿನಷ್ಟಿರುತ್ತವೆ.

ಗಂಡು ನೀಲ ಆಡು 80-100 ಕೆ.ಜಿ ತೂಕ ಹಾಗೂ 39 ಇಂಚು ಎತ್ತರವಿರುತ್ತದೆ. ಬೆನ್ನ ಮೇಲೆ ತಿಳಿ ಬೂದು ಬಣ್ಣದ ಗುರುತು ಇರುತ್ತದೆ. ಸಮುದ್ರ ತೀರದಿಂದ 1200-2600 ಮೀಟರ್/3900-8500‌ ಅಡಿ ಎತ್ತರದಲ್ಲಿ ದಟ್ಟ ಕಾಡು ಪ್ರದೇಶಗಳಲ್ಲಿ ಘಟ್ಟ ಪ್ರದೇಶದ ಅರಣ್ಯದ ಹುಲ್ಲುಗಾವಲಿನಲ್ಲಿ ಹೆಚ್ಚಾಗಿ ಗುಂಪುಗಳಲ್ಲಿ ಸಂಚರಿಸುತ್ತವೆ.

ಸಸ್ಯಾಹಾರಿ ಜೀವಿಯಾಗಿದ್ದು ಬೆಟ್ಟ ಗುಡ್ಡ ಪ್ರದೇಶದ ಹಸಿರು ಸಸ್ಯರಾಶಿಯನ್ನು ಅವಲಂಬಿಸುತ್ತದೆ. ಇಂದು ಇದನ್ನು ಹೆಚ್ಚಾಗಿ ಎರವಿಕುಲಮ್‌ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಣಬಹುದು.

LEAVE A REPLY

Please enter your comment!
Please enter your name here