ಕಟ್ಟಡದಿಂದ ಹಾರಿ ಉದ್ಯಮಿ ಆತ್ಮಹತ್ಯೆ

ಮಂಗಳೂರು: ಯಶಸ್ವಿ ಉದ್ಯಮಿಯೋರ್ವರು ಬಹುಮಹಡಿ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಬೆಂದೂರುವೆಲ್‌ ನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಮೋಹನ್‌ ಅಮೀನ್‌ (48)ಎಂದು ಗುರುತಿಸಲಾಗಿದೆ.


‌ಮಂಗಳೂರಿನ ಬೊಂದೂರುವೆಲ್‌ ನಲ್ಲಿರುವ ಅಂಟ್ಲಾಂಟಿಕ್‌ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದ ಮೋಹನ್‌ 14ನೇ ಮಹಡಿಯ ಟೆರೇಸ್‌ ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕದ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೇಸು ದಾಖಲಿಸಿಕೊಂಡಿದ್ದಾರೆ.

ಮಂಗಳೂರಿನಲ್ಲಿ ವಿವಿಧ ಅಪಾರ್ಟ್‌ ಮೆಂಟ್‌ ನಿರ್ಮಾಣ ಮಾಡಿದ್ದ ಮೋಹನ್‌ ಅಮೀನ್‌ ಯಶಸ್ವಿ ಬಿಲ್ಡರ್‌ ಆಗಿದ್ದರು.

LEAVE A REPLY

Please enter your comment!
Please enter your name here