ಏರ್‌ ಇಂಡಿಯಾ ಹೊಸ ಲೋಗೊ ಅನಾವರಣ

ಮಂಗಳೂರು(ನವದೆಹಲಿ): ಟಾಟಾ ಸಮೂಹದ ಒಡೆತನದಲ್ಲಿರುವ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ನೂತನ ಲೋಗೊ ಅನಾವರಣಗೊಳಿಸಿದೆ.

ಏರ್ ಇಂಡಿಯಾವನ್ನು ಟಾಟಾ ಸನ್ಸ್ ಸ್ವಾಧೀನಪಡಿಸಿಕೊಂಡ ಒಂದೂವರೆ ವರ್ಷಗಳ ಬಳಿಕ ಸಂಸ್ಥೆಗೆ ಹೊಸ ಬ್ರ್ಯಾಂಡ್ ಲೋಗೊ ಪರಿಚಯಿಸಲಾಗಿದೆ. ಫ್ಯೂಚರ್ ಬ್ರ್ಯಾಂಡ್ ಸಂಸ್ಥೆಯ ಸಹಯೋಗದಲ್ಲಿ ಹೊಸ ಬ್ರ್ಯಾಂಡ್ ರಚಿಸಲಾಗಿದೆ. ಏರ್‌ಬಸ್ ಹಾಗೂ ಬೋಯಿಂಗ್ ಕಂಪನಿಗಳಿಂದ 470 ವಿಮಾನಗಳ ಖರೀದಿಗೆ ಏರ್ ಇಂಡಿಯಾ ಒಪ್ಪಂದ ಮಾಡಿಕೊಂಡಿದೆ. ಡಿಸೆಂಬರ್‌ನಿಂದ ನೂತನ ವಿಮಾನಗಳು ಹೊಸ ರೂಪ ಹಾಗೂ ವಿನ್ಯಾಸದೊಂದಿಗೆ ಹಾರಾಟ ಪ್ರಾರಂಭಿಸಲಿದೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here