ಆಗಸ್ಟ್ 18 ಶೂನ್ಯ ನೆರಳಿನ ದಿನ

ಮಂಗಳೂರು(ಬೆಂಗಳೂರು): ಆಗಸ್ಟ್ 18ರಂದು ಮತ್ತೊಮ್ಮೆ ಶೂನ್ಯ ನೆರಳಿನ ದಿನವಾಗಲಿದೆ. ಈ ಕುರಿತು ಮಾಹಿತಿ ನೀಡಿರುವ ಜವಾಹರ್ ಲಾಲ್ ನೆಹರು ತಾರಾಲಯ, ಯಾವುದೇ ವಸ್ತುಗಳನ್ನು 90 ಡಿಗ್ರಿಯಲ್ಲಿಟ್ಟಾಗ ಅದರ ನೆರಳು ಎರಡು ನಿಮಿಷದವರೆಗೆ ಕಾಣುವುದಿಲ್ಲ ಎಂದು ತಿಳಿಸಿದೆ. ಪ್ರತಿ ದಿನ ಮಧ್ಯಾಹ್ನ ಸೂರ್ಯ ನೆತ್ತಿ ಮೇಲೆ ಬರುತ್ತಾನೆ. ಆದರೆ Zero shadow day ದಿನದಂದು ಯಾವುದೇ ಲಂಬ ರೀತಿಯ ವಸ್ತು/ ವ್ಯಕ್ತಿಗಳ ನೆರಳು ಗೋಚರವಾಗದು. ಭೂಮಿ ಗೋಳಾಕಾರದಲ್ಲಿದ್ದು, ಸೂರ್ಯನ ಕಿರಣಗಳು ಮಧ್ಯಾಹ್ನ ಸಮಭಾಜಕದಲ್ಲಿ ಮಾತ್ರ ಬೀಳುತ್ತವೆ. ಈ ನೆರಳು ಉತ್ತರ/ದಕ್ಷಿಣ ದಿಕ್ಕಿಗೆ ಬೀಳುವುದಿಲ್ಲ. ಸೂರ್ಯನ ಪಥವು ಉತ್ತರದ ಚಲನೆಯಲ್ಲಿ 6 ತಿಂಗಳು. ಉತ್ತರಾಭಿಮುಖವಾಗಿರುತ್ತದೆ. ದಕ್ಷಿಣದ ಚಲನೆಯಲ್ಲಿ 6 ತಿಂಗಳುಗಳು ದಕ್ಷಿಣಾಭಿಮುಖವಾಗಿರುತ್ತದೆ ಎಂದು ತಾರಾಲಯದ ವಿಜ್ಞಾನಿಗಳು ತಿಳಿಸಿದ್ದಾರೆ.

ಅಪರೂಪದ ಶೂನ್ಯ ನೆರಳು ದಿನಕ್ಕೆ ಬೆಂಗಳೂರಿಗರು ಈ ವರ್ಷ ಸಾಕ್ಷಿಯಾಗಿದ್ದರು. ಏಪ್ರಿಲ್ 25ರಂದು ಮಧ್ಯಾಹ್ನ 12.17ಕ್ಕೆ ಶೂನ್ಯ ನೆರಳಿನ ದಿನ ಗೋಚರವಾಗಿತ್ತು. ಆ ದಿನದಂದು ಎರಡು ನಿಮಿಷಗಳ ಕಾಲ ಯಾವುದೇ ನೆರಳು ಕಂಡು ಬಂದಿರಲಿಲ್ಲ. ಸೂರ್ಯ ಸರಿಯಾಗಿ ಮನುಷ್ಯನ ನೆತ್ತಿಯ ಮೇಲೆ ಅಥವಾ ಕಿರಣಗಳು ಯಾವುದೇ ವಸ್ತುವಿನ ಮೇಲೆ ಲಂಬವಾಗಿ ಬಿದ್ದಾಗ ಅದು ಶೂನ್ಯ ನೆರಳಿನ ನಿಮಿಷವಾಗುತ್ತದೆ.

 

LEAVE A REPLY

Please enter your comment!
Please enter your name here