ಅಸ್ಸಾಂ ಬಿಜೆಪಿ ಕಚೇರಿಯಲ್ಲಿ ಬೆತ್ತಲೆ ಮೃತದೇಹ ಪತ್ತೆ!

ಮಂಗಳೂರು(ಅಸ್ಸಾಂ): ಅಸ್ಸಾಂನ ಕ್ಯಾಚಾರ್ ಜಿಲ್ಲೆಯ ಬಿಜೆಪಿ ಕಚೇರಿಯಲ್ಲಿ ಬೆತ್ತಲೆ ಮೃತದೇಹವೊಂದು ಪತ್ತೆಯಾಗಿದೆ.ಆದರೆ ಮೃತದೇಹ ಯಾರದ್ದು ಎಂಬ ಬಗ್ಗೆ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ಮೂಲಗಳ ಪ್ರಕಾರ ಮೃತ ವ್ಯಕ್ತಿ ಸುಧಾಂಗ್ಶುದಾಸ್ ಎಂದು ಹೇಳಲಾಗುತ್ತಿದ್ದರೂ, ಪೊಲೀಸರು ಖಚಿತಪಡಿಸಿಲ್ಲ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕ್ಯಾಚಾರ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ”ಯಾರಾದರೂ ಸತ್ತ ವ್ಯಕ್ತಿಯ ಪರಿಚಯವಿದ್ದರೆ, ಅವರು ಮುಂದೆ ಬಂದು ತಿಳಿಸಬೇಕು ಎಂದು ಜನರಿಗೆ ಮನವಿ ಮಾಡಿದ್ದೇವೆ” ಎಂದು ತಿಳಿಸಿದ್ದಾರೆ.

”ಯಾವ ಸಂದರ್ಭದಲ್ಲಿ ಈ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂಬುದೂ ತಿಳಿದಿಲ್ಲ. ಆದರೆ ಶವಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ವ್ಯಕ್ತಿ ಸ್ವಾಭಾವಿಕವಾಗಿ ಸಾವನ್ನಪ್ಪಿದ್ದಾನೆಯೇ ಅಥವಾ ಅವನನ್ನು ಕೊಲೆ ಮಾಡಲಾಗಿದೆಯಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ” ಎಂದು ಅಧಿಕಾರಿಗಳು ಹೇಳಿದ್ದಾರೆ.ಕ್ಯಾಚಾರ್‌ನ ಪೊಲೀಸ್ ಅಧೀಕ್ಷಕ ನುಮಲ್ ಮಹತ್ತಾ ಮಾತನಾಡಿ, ”ತನಿಖೆ ನಡೆಯುತ್ತಿದೆ ಮತ್ತು ಸಾಧ್ಯವಿರುವ ಎಲ್ಲ ದೃಷ್ಟಿಕೋನಗಳಲ್ಲೂ ವಿಚಾರಣೆ ನಡೆಸಲಾಗುತ್ತದೆ” ಎಂದು ಹೇಳಿದ್ದಾರೆ.

 

LEAVE A REPLY

Please enter your comment!
Please enter your name here