ಪ್ರಾಣಿ ಪ್ರಪಂಚ-69

ಕೋಲಾ (Phascolarctos cinereus)

ಮಕ್ಕಳಿಗಾಗಿ ವಿಶೇಷ ಮಾಹಿತಿ

ಸದಾ ಮರದ ಮೇಲೆಯೇ ಇರುವ ಕೋಲಾಗಳು ನೋಡಲು ಚಿಕ್ಕ ಕರಡಿಯಂತೆ ಕಂಡರೂ ಮೈಮೇಲೆ ದಟ್ಟ ರೋಮಗಳನ್ನು ಹೊಂದಿರುತ್ತವೆ.

ಸುಮಾರು 9ಕೆ.ಜಿ. ತೂಕವಿರುವ ಕೋಲಾ ಕರಡಿಯು ಸಸ್ಯಾಹರಿ ಪ್ರಾಣಿ. ಮನುಷ್ಯನ ಹಾಗೆ ಸಮಾಜಜೀವಿ. ಸಮಯ ಸಂದರ್ಭವೆಂದರೆ ಒಂದಕ್ಕೊಂದು ನೆರವಾಗುತ್ತವೆ. ತಮ್ಮದೇ ಆದ ಗಡಿಸೀಮೆಗಳೊಂದಿಗೆ ಗುರುತಿಸಿಕೊಳ್ಳುತ್ತವೆ. ತಮ್ಮ ಪರಿಮಳದಿಂದ ತಾವು ಹೇಳಿ ತಿಳಿಸಬೇಕಾದ ಅಂಶಗಳನ್ನು ಮರಗಳ ಮೇಲೆ ಪಸರಿಸಿ ಇತರ ಕೋಲಾಗಳಿಗೆ ಸೂಚನೆ ನೀಡುತ್ತದೆ. ವಿಚಿತ್ರ ವಿವಿಧ ರೀತಿಯ ಶಬ್ಧಗಳಿಂದ, ಕೂಗುಗಳಿಂದ ದೂರದಲ್ಲಿರುವ ಕೋಲಾಗಳನ್ನು ಸಂಪರ್ಕಿಸುವುದೂ ಉಂಟು.

ನೀಲಗಿರಿ ತೋಪುಗಳು, ನೀಲಗಿರಿ ಕಾಡುಪ್ರದೇಶಗಳಲ್ಲಿ ನಾವು ಇವುಗಳನ್ನು ಕಾಣಬಹುದು. ಏಕೆಂದರೆ ನೀಲಿ ಮರ ಹಾಗೂ ಅದರ ಎಲೆಗಳನ್ನು, ಮರಗಳು ಹೊರಹಾಕುವ ಗೋಂದನ್ನು ಸೇವಿಸಿ ಬದುಕುವುದು. ವರ್ಷಕ್ಕೊಮ್ಮೆ ಮರಿ ಹಾಕುವ ಹೆಣ್ಣು ಕೋಲಾ 12 ವರ್ಷ ಬದುಕಿ 5-6 ಮರಿಗಳನ್ನು ಹಾಕುವುದು. ನೀಲಗಿರಿ ಎಲೆಗಳನ್ನು ಸೇವಿಸಿ ಅದರಲ್ಲಿರುವ ನೀರಿನ ಅಂಶಗಳನ್ನು ಬಳಸುವುದರಿಂದ ನೀರಿಗಾಗಿ ಕೋಲಾ ಕರಡಿಯು ತವಕಪಡುವುದಿಲ್ಲ. ದೇಹಕ್ಕೆ ಬೇಕಾದ 90% ರಷ್ಟು ನೀರನ್ನು ಗೋಂದಿನ ಎಲೆಗಳಲ್ಲಿ ತಿಂದು ಪಡೆಯುವುದು, ದೇಹದ ಸುಸ್ಥಿತಿ ಹದಗೆಟ್ಟಾಗ ಅಥವಾ ಬರಗಾಲ, ಮಳೆ ಇಲ್ಲದಂತಾದಾಗ ಮಾತ್ರ ನೀರು ಕುಡಿಯುತ್ತದೆ.

LEAVE A REPLY

Please enter your comment!
Please enter your name here