ಚಂದ್ರಯಾನ-3: ಇಸ್ರೋದಿಂದ ಚಂದ್ರನ ಸ್ಪರ್ಶಕ್ಕೂ ಮೊದಲಿನ ವಿಡಿಯೋ ಬಿಡುಗಡೆ

ಮಂಗಳೂರು(ಬೆಂಗಳೂರು): ವಿಕ್ರಮ ಲ್ಯಾಂಡರ್ ಚಂದ್ರನನ್ನು ಸ್ಪರ್ಶಿಸುವ ಮೊದಲು ಸೆರೆಹಿಡಿದ ಅಂತಿಮ ಕ್ಷಣಗಳ ಚಿತ್ರಗಳ ವಿಡಿಯೋ ತುಣುಕನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಹಂಚಿಕೊಂಡಿದೆ. ಚಂದ್ರನನ್ನು ಸ್ಪರ್ಶಿಸುವ ಸ್ವಲ್ಪ ಸಮಯಕ್ಕೂ ಮೊದಲು ಲ್ಯಾಂಡರ್ ಇಮೇಜರ್ ಕ್ಯಾಮರಾ ಚಂದ್ರನ ಈ ಚಿತ್ರವನ್ನು ಸೆರೆಹಿಡಿದಿದೆ ಎಂದು ಇಸ್ರೋ ತಿಳಿಸಿದೆ.

ಈ‌ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದಿರುವ ಚಂದ್ರಯಾನ-3ರ ಬಗ್ಗೆ ಇಸ್ರೋ ಹೊಸ ಮಾಹಿತಿ ನೀಡಿದೆ. ಚಂದ್ರಯಾನ 3 ಮಿಷನ್‌ನ ಎಲ್ಲ ಚಟುವಟಿಕೆಗಳೂ ಸಮರ್ಪಕವಾಗಿ ಸಾಗುತ್ತಿವೆ ಎಂದು ಇಸ್ರೋ ಎಕ್ಸ್ ನಲ್ಲಿ ತಿಳಿಸಿದೆ. ಲ್ಯಾಂಡರ್ ಮಾಡ್ಯೂಲ್ ಉಪಕರಣಗಳಾದ ಎಲ್ಐಎಸ್ಎ, ರಂಭಾ ಮತ್ತು ಚೇಸ್ಟ್ ಕಾರ್ಯಾರಂಭ ಮಾಡಿವೆ. ರೋವರ್ ಮೊಬಿಲಿಟಿ ಕಾರ್ಯಾಚರಣೆಗಳೂ ಆರಂಭವಾಗಿವೆ ಎಂದು ಮಾಹಿತಿ ನೀಡಿದೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here