ಗಾಂಜಾ ಸೇವನೆ ಮಾಡಿದ ವ್ಯಕ್ತಿಗೆ ದಂಡ ವಿಧಿಸಿ ತೀರ್ಪು ನೀಡಿದ ಮಂಗಳೂರು ನ್ಯಾಯಾಲಯ

ಮಂಗಳೂರು: ದಿನಾಂಕ 6/12/2019 ರಂದು ಮಂಗಳೂರಿನ ನಂದುಗುಡ್ಡ ನಿವಾಸಿ ಶಾಯಿರ್ ಮೊಹಮ್ಮದ್ ಎಂಬಾತ ಬಿಜೈ ಆನೆಗುಂಡಿ ಎಂಬಲ್ಲಿ ರಾತ್ರಿ ಗಾಂಜಾ ಸೇವನೆ ಮಾಡಿ ಮಂಗಳೂರು ಪೂರ್ವ ಪೋಲೀಸ್ ಠಾಣೆ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕ ದ್ರವ್ಯ ಸೇವನೆ ಮಾಡಿರುವುದು ಧೃಢ ಪಟ್ಟಿರುವುದರಿಂದ ಆತನ ವಿರುದ್ಧ ಎನ್‌ ಡಿ ಪಿ ಎಸ್ ಕಾಯ್ದೆ 27(ಬಿ) ಅನ್ವಯ ಕೇಸು ದಾಖಲಿಸಿದ ಕದ್ರಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕಿ ಅನಿತಾ ನಿಕ್ಕಂ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಮಂಗಳೂರಿನ 6ನೇ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಆಂಬ್ರಿನ್ ಸುಲ್ತಾನ ಆರೋಪಿಯ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ರೂಪಾಯಿ 5000/ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ಪಾವತಿಸಲು ತಪ್ಪಿದ್ದಲ್ಲಿ 30 ದಿನಗಳ ಸಾದ ಜೈಲು ಶಿಕ್ಷೆ ಅನುಭವಿಸುವಂತೆಯು ತೀರ್ಪಿನಲ್ಲಿ ಹೇಳಲಾಗಿದೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ್ ಸಾಕ್ಷಿಗಳ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.

LEAVE A REPLY

Please enter your comment!
Please enter your name here