ಗಣೇಶೋತ್ಸವದ ಲಾಟರಿ ಖರೀದಿಗೆ ಕಿಲೋಮೀಟರ್ ಉದ್ದದ ಸಾಲು

ಮಂಗಳೂರು(ಪಣಜಿ): ಗೋವಾದ ಕೆಪೆಮ್ ಸಾರ್ವಜನಿಕ ಗಣೇಶೋತ್ಸವ ಮಂಡಳಿಯು ಲಾಟರಿ ಮೂಲಕ  ಬಂಪರ್ ಬಹುಮಾನಗಳನ್ನು ಘೋಷಿಸಿದ್ದು ಟಿಕೆಟ್‌ ಖರೀದಿಸಲು ಸಾರ್ವಜನಿಕರು ಕಿ.ಮೀ ಉದ್ದಕ್ಕೆ ಸರತಿ ಸಾಲಿನಲ್ಲಿ ನಿಂತ ಘಟನೆ ಕೆಪೆಮ್‌ ನ ಮುನ್ಸಿಪಲ್‌ ಗಾರ್ಡನ್‌ ಬಳಿ ನಡೆದ ಟಿಕೆಟ್‌ ಬಿಡುಗಡೆ ಕಾರ್ಯಕ್ರಮದಲ್ಲಿ ನಡೆಯಿತು.

10 ಹೈ ಎಂಡ್ ಕಾರುಗಳು, 10 ಸ್ಕೂಟರ್ ಗಳು, ಜೊತೆಗೆ, 20 ಬಂಪರ್ ಬಹುಮಾನ, 70 ಲಕ್ಷ ರೂಪಾಯಿಗೂ ಅಧಿಕ ನಗದು ಬಹುಮಾನ ಕೆಪೆಮ್ ಸಾರ್ವಜನಿಕ ಗಣೇಶೋತ್ಸವ ಮಂಡಳಿಯ ಲಾಟರಿಯಲ್ಲಿದೆ. ಇದೇ ಕಾರಣಕ್ಕೆ ಲಾಟರಿ ಖರೀದಿಗೆ ಜನ ಮುಗಿಬಿದ್ದಿದ್ದು, ಪೊಲೀಸರು ಹಾಗೂ ಮಂಡಳಿಯ ಸ್ವಯಂಸೇವಕರು ಜನಸಂದಣಿ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.

36ನೇ ಗಣೇಶೋತ್ಸವ ಆಚರಿಸುತ್ತಿರುವ ಕೆಪೆಮ್ ಸಾರ್ವಜನಿಕ ಗಣೇಶೋತ್ಸವ ಮಂಡಳಿಯು ಪ್ರತಿವರ್ಷದಂತೆ ಈ ವರ್ಷವೂ ಲಾಟರಿ ಟಿಕೆಟ್ ಗಳನ್ನ ಮಾರಾಟ ಮಾಡುತ್ತಿದ್ದು, ವರ್ಷದಿಂದ ವರ್ಷಕ್ಕೆ ಆಕರ್ಷಕ ಬಹುಮಾನಗಳನ್ನ ನೀಡುತ್ತಿರುವುದರಿಂದ ಟಿಕೆಟ್ ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ. ಭಾನುವಾರ ಕೆಪೆಮ್ ನ ಮುನ್ಸಿಪಲ್ ಗಾರ್ಡನ್ ನಲ್ಲಿ ಲಾಟರಿ ಟಕೆಟ್ ಉದ್ಘಾಟನಾ ಕಾರ್ಯಕ್ರಮವನ್ನ ಆಯೋಜಿಸಲಾಗಿದ್ದು, ಟಿಕೆಟ್ ಖರೀದಿಗೆ ಜನರ ಸಾಲು ಕಿಲೋ ಮೀಟರ್ ಉದ್ದಕ್ಕೆ ಚಾಚಿತ್ತು. ಗಣೇಶೋತ್ಸವದ ಸಂದರ್ಭದಲ್ಲಿ ಸಾರ್ವಜನಿಕವಾಗಿ ವಿಜೇತರ ಹೆಸರುಗಳನ್ನ ಘೋಷಿಸಲಿದ್ದು, ಅದೃಷ್ಟವಂತರು ಕಾರು, ಸ್ಕೂಟರ್ ಸೇರಿದಂತೆ ಲಕ್ಷ ಲಕ್ಷ ರೂಪಾಯಿ ನಗದನ್ನ ಮನೆಗೆ ಒಯ್ಯಲಿದ್ದಾರೆ.

LEAVE A REPLY

Please enter your comment!
Please enter your name here