ಮಂಗಳೂರು(ಮಧ್ಯಪ್ರದೇಶ): ಅಸ್ವಸ್ಥಗೊಂಡು ಅಸಹಾಯಕ ಸ್ಥಿತಿಯಲ್ಲಿದ್ದ ಚಿರತೆಯನ್ನು ಸುತ್ತುವರೆದ ಗ್ರಾಮಸ್ಥರ ಗುಂಪೊಂದು ಅದರ ಮೇಲೆ ಕುಳಿತು ಸೆಲ್ಫಿ ತೆಗೆದುಕೊಂಡು ಅದರ ಮೇಲೆ ಸವಾರಿ ಮಾಡಲು ಪ್ರಯತ್ನಿಸಿ ಚಿರತೆಯ ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸಿದ ಘಟನೆ ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ನಡೆದಿದೆ.
ದೇವಾಸ್‌ನ ಇಕ್ಲೇರಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ರಕ್ಷಿಸಿ, ಚಿಕಿತ್ಸೆ ನೀಡುತ್ತಿದ್ದಾರೆ. ಚಿರತೆಯನ್ನ ಸುತ್ತುವರಿದು, ಆನೆ ಮೇಲೆ ಕುಳಿತಂತೆ ಚಿರತೆಯ ಮೇಲೆ ಕುಳಿತು ಕಪಿಚೇಷ್ಟೆ ಆಡಿದ್ದಾರೆ. ಸುಮಾರು 15ರಿಂದ 20 ಜನರು ಚಿರತೆ ಬಳಿ ಸುತ್ತುವರಿದು ಅದರ ಜೊತೆಗೆ ಹುಚ್ಚಾಟ ಮೆರೆದಿದ್ದಾರೆ. ಅಸ್ವಸ್ಥತೆಯಿಂದ ಬಳಲುತ್ತಿರುವ ಚಿರತೆಯನ್ನು ಇಂದೋರ್ ನಗರದ ಮೃಗಾಲಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದೆ. ಇಂದೋರ್‌ನಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಇಕ್ಲೇರಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಚಿರತೆಯನ್ನು ರಕ್ಷಿಸಲಾಗಿದೆ ಎಂದು ದೇವಾಸ್‌ನಲ್ಲಿರುವ ಅರಣ್ಯ ಇಲಾಖೆಯ ಖೋನಿ ಅಭಯಾರಣ್ಯದ ಅಧೀಕ್ಷಕ ವಿಕಾಸ್ ಮಹೋರ್ ಅವರು ಮಾಹಿತಿ ನೀಡಿದ್ದಾರೆ.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ