ಪಿರಾನ(Pygocentrus nattereri)
ಮಕ್ಕಳಿಗಾಗಿ ವಿಶೇಷ ಮಾಹಿತಿ
ದ.ಅಮೇರಿಕಾದ ಅತ್ಯಂತ ಅಪಾಯಕಾರಿ ಸಿಹಿನೀರ ಮೀನು. ವೆನಿಜ್ಯೂಲಾ, ಬ್ರೆಜಿಲ್ ಪ್ರಾಂತ್ಯಗಳಲ್ಲಿಯೂ ಕಾಣಬಹುದು.
ನೋಡಲು 8-18 ಇಂಚು ಉದ್ದವಿದ್ದು ಸಣ್ಣದಾದ ದೇಹ ರಚನೆಯಿರುತ್ತೆ. ನೀಲಿ, ಹಸಿರು, ಕಂದು ಅಥವಾ ಕಪ್ಪು ಬಣ್ಣದ್ದಾಗಿರುತ್ತದೆ. ಪಿರಾನ್ಹಾ ವಾಸಿಸುವ ನೀರಿನಲ್ಲಿ ಅವುಗಳು ಸಣ್ಣಪುಟ್ಟ ಮೀನುಗಳಿಂದ ಹಿಡಿದು ದೊಡ್ಡ ಮೀನುಗಳು, ಜಲಚರಗಳು ಹಾಗೂ ಮನುಷ್ಯನನ್ನೂ ಛಿದ್ರಛಿದ್ರವಾಗಿಸಿ ಚೀರಿ ಎಲ್ಲಾ ಒಟ್ಟಿಗೆ ಸೇರಿಸಿ ತಿನ್ನುತ್ತದೆ.
ಪ್ರಪಂಚದಲ್ಲೆಡೆ ಇವುಗಳನ್ನು ಸಾಕುಪ್ರಾಣಿಯಾಗಿ ಅಕ್ವೇರಿಯಂಗಳಲ್ಲಿ ಸಾಕುತ್ತಾರೆ. ಆಹಾರ ಹೆಚ್ಚಾಗಿ ಸೇವಿಸುವುದರಿಂದ ಕೆಲವೊಮ್ಮೆ ಆಹಾರದ ಕೊರತೆ ಉಂಟಾದಲ್ಲಿ ಪಿರಾನ್ಹಾಗಳು ಇತರೆ ಪಿರಾನ್ಹಾಗಳನ್ನು ತಿಂದು ಬದುಕುತ್ತದೆ.
ಮಾನವನು ಪಿರಾನ್ಹಾಗಳನ್ನು ಆಹಾರಕ್ಕಾಗಿ ಬಳಸಬಹುದು. ಆದರೆ ಹರಿತವಾದ ಹಲ್ಲುಗಳಿರುವ ಕಾರಣ ಈ ಪಿರಾನ್ಹಾಗಳು ಬಲೆಯನ್ನು ಚೀರಿ ನೀರಿನಲ್ಲಿ ತಪ್ಪಿಸಿಕೊಳ್ಳುತ್ತೆ.