ರಾಷ್ಟ್ರೀಯ ಮಟ್ಟದ ಬಾಕ್ಸಿಂಗ್‌ ಪ್ರತಿಭೆ ವಿರಾಜ್‌ ಮೆಂಡನ್‌ ನೇಣಿಗೆ ಶರಣು

ಮಂಗಳೂರು(ಉಡುಪಿ): ಬಾಕ್ಸಿಂಗ್‌ ಕ್ಷೇತ್ರದಲ್ಲಿ ಮಿಂಚಿದ್ದ ರಾಷ್ಟ್ರೀಯ ಮಟ್ಟದ ಬಾಕ್ಸಿಂಗ್‌ ಪ್ರತಿಭೆ ವಿರಾಜ್‌ ಮೆಂಡನ್‌ ನೇಣಿಗೆ ಶರಣಾಗಿದ್ದಾರೆ.

ಇಂದು ಮುಂಜಾನೆ ಮನೆಯವರು ಮೀನುಗಾರಿಕೆಗೆ ತೆರಳಿದ ವೇಳೆ ಒಬ್ಬರೇ ಮನೆಯಲ್ಲಿದ್ದ ಸಂದರ್ಭ ವಿರಾಜ್‌ ನೇಣಿಗೆ ಶರಣಾಗಿದ್ದಾರೆ. 28 ವರ್ಷದ ವಿರಾಜ್‌ ಮಲ್ಪೆ ಪಡುಕರೆಯ ನಿವಾಸಿಯಾಗಿದ್ದಾರೆ. ಗೆಳೆಯ ಸಲಹೆಯ ಮೇರೆಗೆ ಬಾಕ್ಸಿಂಗ್‌ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಹೊರಟ್ಟಿದ್ದ ವಿರಾಜ್‌ ಭಾರತದ 5ನೇ ಶ್ರೇಯಾಂಕದ ಬಾಕ್ಸಿಂಗ್‌ ಪಟುವಾಗಿದ್ದರು. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ದೇಶಕ್ಕೆ ಕೀರ್ತಿ ತರಬೇಕೆಂಬ ಅಧಮ್ಯ ಹಂಬಲ ಹೊಂದಿದ್ದ ವಿರಾಜ್‌ ಆತ್ಮಹತ್ಯೆ ಆಶ್ಚರ್ಯವನ್ನುಂಟು ಮಾಡಿದೆ.

LEAVE A REPLY

Please enter your comment!
Please enter your name here