10,000 ಅಡಿ ಎತ್ತರದಲ್ಲಿ ಹಾರಾಡಿದ G20 ಧ್ವಜ-ಏ‌ರ್ಫೋರ್ಸ್ ವಿಂಗ್‌ ಕಮಾಂಡರ್‌ ಸ್ಕೈಡೈವಿಂಗ್

ಮಂಗಳೂರು: ನಾಳೆಯಿಂದ ಎರಡು ದಿನ ಭಾರತದ ಆತಿಥ್ಯದೊಂದಿಗೆ ದೆಹಲಿಯಲ್ಲಿ G20 ಶೃಂಗಸಭೆ ನಡೆಯಲಿದ್ದು, ಜಾಗತಿಕ ನಾಯಕರು ಭಾರತಕ್ಕೆ ಆಗಮಿಸುತ್ತಿದ್ದಾರೆ. ಶೃಂಗಸಭೆಗೆ ದೆಹಲಿ ಸಂಪೂರ್ಣವಾಗಿ ಸಜ್ಜಾಗಿದ್ದು ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಜಿ20 ಶೃಂಗಸಭೆ ಹಿನ್ನೆಲೆಯಲ್ಲಿ ರಾಜಸ್ಥಾನದಲ್ಲಿ ಭಾರತೀಯ ವಾಯುಪಡೆಯ ಯೋಧ ಜಿ20 ಧ್ವಜದೊಂದಿಗೆ ಸ್ಕೈಡೈವಿಂಗ್ ಮಾಡುವ ದೃಶ್ಯಗಳು ವೈರಲ್ ಆಗಿದೆ.

ಸೌತ್ ವೆಸ್ಟರ್ನ್ ಏರ್ ಕಮಾಂಡ್ ಪ್ರಕಾರ, ವಿಂಗ್ ಕಮಾಂಡರ್ ಗಜಾನಂದ ಯಾದವ್ ಅವರು 10,000 ಅಡಿ ಎತ್ತರದಿಂದ ಜಿ20 ಧ್ವಜದೊಂದಿಗೆ ‘ವಸುಧೈವ ಕುಟುಂಬಕಂ-ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬ ಥೀಮ್‌ನೊಂದಿಗೆ 10,000 ಅಡಿ ಎತ್ತರದಿಂದ ಸ್ಕೈಡೈವಿಂಗ್ ಮಾಡಿದ್ದಾರೆ. ಏರ್ ಫೋರ್ಸ್ ಸ್ಟೇಷನ್ ಮಾಧ್ ಐಲ್ಯಾಂಡ್‌ನಲ್ಲಿ ವಿಂಗ್ ಕಮಾಂಡರ್ ಆಗಿರುವ ಯಾದವ ಜೋಧ್‌ಪುರದ ಫಲೋಡಿಯಲ್ಲಿರುವ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ಈ ಹಾರಾಟ ನಡೆಸಿದ್ದಾರೆ. ಈ ವಿಡಿಯೋವನ್ನು ಕಳೆದ  ಮಾರ್ಚ್‌ನಲ್ಲಿ ಮಾಡಲಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here