ಪ್ರಾಣಿ ಪ್ರಪಂಚ-85

ಬ್ರೌನ್‌ಬೇರ್‌ (Cursus arctos)

ಮಕ್ಕಳಿಗಾಗಿ ವಿಶೇಷ ಮಾಹಿತಿ

ಈ ಕಂದು ಕರಡಿಯು ಮೈಮೇಲೆ ಉದ್ದವಾದ ಒರಟು ಕೂದಲುಗಳನ್ನು ಹೊಂದಿದೆ. ಇವು ಯುರೋಪ್‌, ಏಶಿಯಾ ಮತ್ತು ಉತ್ತರ-ಪಶ್ಚಿಮ (ವಾಯುವ್ಯ) ಅಮೇರಿಕಾಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಸುಮಾರು 80 ಪ್ರಕಾರಗಳ ಕಂದು ಕರಡಿಗಳ ಬಗ್ಗೆ ವಿವರಣೆಯಿದೆ. ಉತ್ತರ ಅಮೇರಿಕಾದ ಕರಡಿಗಳು ಬಿಳಿ ಬಣ್ಣದವು ಅಥವಾ ಬಿಳಿ-ಕಪ್ಪು ಮಿಶ್ರ ಬಣ್ಣದವು. ಕಂದುಕರಡಿಗಳು ಸರ್ವಭಕ್ಷಕಗಳು. ಪ್ರಾಣಿ, ಸಸ್ಯ ಎರಡೂ ಅವುಗಳ ಆಹಾರ. ಮರಗಳ ಬೇರು, ಚಿಗುರು, ಚಿಕ್ಕ ಸಸ್ತನಿಗಳು, ಮೀನು, ಪ್ರಾಣಿಗಳ ಗೋರಸ್ಥರ ಮಾಂಸ ಇವುಗಳ ಆಹಾರ. ಅವುಗಳು, ಬಿಲ, ರಂಧ್ರಗಳಲ್ಲಿ ಆಹಾರವನ್ನು ಬಚ್ಚಿಡುತ್ತವೆ, ಆಹಾರವನ್ನು ಹುಡುಕಲು ಸದಾ ಚಟುವಟಿಕೆಯಿಂದ ಇರುತ್ತವೆ. ಕೆಲವು ದಕ್ಷಿಣ ಭಾಗಗಳನ್ನು ಬಿಟ್ಟು, ಸಾಮಾನ್ಯವಾಗಿ ಚಳಿಗಾಲದಲ್ಲಿ ಗುಹೆಗಳಲ್ಲಿ ವಾಸಿಸುತ್ತವೆ.

ವಸಂತ ಹಾಗೂ ಬಿಸಿಲುಗಾಲದಲ್ಲಿ ಮೇದಸ್ಸನ್ನು ಸಂಗ್ರಹಿಸುತ್ತವೆ (Fat), ಚಳಿಗಾಲದಲ್ಲಿ ಕರಡಿಗಳು 6-8 ತಿಂಗಳವರೆಗೆ ಗರ್ಭ ಧರಿಸುತ್ತವೆ. ಸಾಮಾನ್ಯವಾಗಿ ಅವಳಿ ಮರಿಗಳಿಗೆ ಜನ್ಮ ನೀಡುತ್ತವೆ. ಜನಿಸಿದಾಗ ಕರಡಿ ಮರಿಯ ತೂಕವು ಒಂದು ಕೆ.ಜಿ.ಗಿಂತ ಕಡಿಮೆ ಇರುತ್ತದೆ. ಯುರೋಪಿಯನ್‌ ಗಂಡು ಕರಡಿಗಳು ಸಾಮಾನ್ಯವಾಗಿ ಒಬ್ಬಂಟಿಯಾಗಿರುತ್ತವೆ. ಅವು ಚೆನ್ನಾಗಿ ಓಡುತ್ತವೆ, ಈಜುತ್ತವೆ. ಅವುಗಳು 120-210 ಸೆಂ.ಮೀ ಉದ್ದ ಹಾಗೂ ತೂಕವು 135-250 ಕೆ.ಜಿ ಇರುತ್ತವೆ. ಇದಕ್ಕೆ ಅಪವಾದವಾಗಿ ಸೈಬೇರಿಯಾದ ಗಂಡು ಕರಡಿಗಳು 360 ಕೆ.ಜಿ ಇರುತ್ತವೆ. ಅವುಗಳ ಮೈಮೇಲಿನ ಕೂದಲಿನ ಬಣ್ಣವು ಹಲವಾರು ವಿಧಗಳಲ್ಲಿರುತ್ತದೆ. ಬೂದು ಮಿಶ್ರಿತ ಬಿಳಿ ನೀಲಿ ಛಾಯೆ ಕಪ್ಪುಛಾಯೆ ಮುಂತಾಗಿ. ಯುರೇಶಿಯಾದ ಕಂದು ಕರಡಿಗಳು ಸಾಮಾನ್ಯವಾಗಿ ಝೂಗಳಲ್ಲಿ ಇರುತ್ತವೆ. ಮೊದಲು ಅವುಗಳ ಲಯಬದ್ಧವಾದ ಹಾಡಿಗೆ ಕುಣಿಯಲು ತರಬೇತಿ ನೀಡಲಾಗುತ್ತಿತ್ತು. ನರ್ತಿಸುವ ಕರಡಿಗಳಿಗೆ ಯುರೋಪಿನಲ್ಲಿ ಮನರಂಜನಾ ಸ್ಥಳಗಳಲ್ಲಿ, ಹಬ್ಬ-ಸಮಾರಂಭಗಳಲ್ಲಿ ತುಂಬಾ ಬೇಡಿಕೆಯಿತ್ತು, ಒಂದು ಕಾಲದಲ್ಲಿ ಇವುಗಳು ಯುರೋಪ್‌, ಏಶಿಯಾಗಳಲ್ಲಿ ಹೆಚ್ಚಾಗಿದ್ದವು. ಕೆಲವಾರು ಕಡೆ ಅವುಗಳ ಸಂಖ್ಯೆಯು ಕಡಿಮೆಯಾಗಿದೆ. ಇವುಗಳ ಸಂಖ್ಯೆಯು ಸುಮಾರು ಎರಡು ಲಕ್ಷವಿದ್ದು ವಿಶ್ವದ ಎಲ್ಲೆಡೆ ಹಬ್ಬಿದೆ, ಮನುಷ್ಯರಿಗೆ ಹತ್ತಿರ ಇರುವ ಕರಡಿಗಳು ವಿನಾಶಕಾರಿ ಎನಿಸಿವೆ. ಮನುಷ್ಯನು ಅವುಗಳಿಗೆ ಪ್ರಿಯವಾದ ಆಹಾರವಾಗಿದ್ದಾನೆ. ಕರಡಿಯ ಗಾತ್ರ, ದಾಳಿ ಭಯದಿಂದ ಮನುಷ್ಯ ಅವುಗಳಿಂದ ದೂರವಿರಲು ಬಯಸುತ್ತಾನೆ.

LEAVE A REPLY

Please enter your comment!
Please enter your name here