ಪ್ರಾಣಿ ಪ್ರಪಂಚ-91

ಟಾಪಿರ್‌ (Tapirus terrestris)


ಮಕ್ಕಳಿಗಾಗಿ ವಿಶೇಷ ಮಾಹಿತಿ

ಇದು 30 ವರ್ಷ ಬದುಕುತ್ತದೆ. 13ತಿಂಗಳ ಗರ್ಭಾವಸ್ಥೆಯ ನಂತರ ಮರಿ ಜನನ. ಉತ್ತಮ ಈಜು ಪ್ರಾಣಿಗಳು. ಒಂದೇ ಜಿಗಿತದಲ್ಲಿ ನೀರಲ್ಲಿ ಧುಮುಕಿ ಜಲಸಸ್ಯಗಳನ್ನು ತಿಂದು ಬದುಕುವುದು. ಸೂರ್ಯ  ಹುಟ್ಟುವ ಮೊದಲು ಹಾಗೂ ಮುಳುಗಿದ ನಂತರ ಈ ಸಸ್ಯಹಾರಿಯು ತನ್ನ ಆಹಾರ ಸೇವಿಸುತ್ತದೆ.

ಒರಟು, ದಪ್ಪ ಚರ್ಮ, ಈಜಲು ಮುನ್ನುಗ್ಗಲು ಗುಡ್ಡ, ಮರ ಹತ್ತಲು ಹಾಗೂ ಒರಟಾದ ಹಾದಿಯನ್ನು ಸರಾಗವಾಗಿ ಹತ್ತಲು ಸಹಾಯಕಾರಿ. 4 ಉಪಜಾತಿಗಳನ್ನೊಳಗೊಂಡ ಟಾಪಿರ್‌ ಗಲೆಲ್ಲವು ಅವಸಾನದಂಚಿನಲ್ಲಿದೆ. ನೋಲು ಟಾಪಿರ್‌ ಗಳು ಹಂದಿ ಹಾಗೂ ಇರುವೆ ಜಾತಿ ಪ್ರಾಣಿಯಂತೆ ಕಾಣುವುದು.

ಟಾಪಿರ್‌ ಗಳು ಓಡುವುದರಲ್ಲಿ ಅತ್ಯಂತ ವೇಗ, ನೀರಿನಲ್ಲಿ ಕಾಲಕಳೆಯುವುದು ಇಷ್ಟ. ಮಧ್ಯರಾತ್ರಿಯ ನಂತರವೇ ವಿಶ್ರಾಮ. ಉಳಿದೆಲ್ಲಾ ಸಮಯದಲ್ಲಿ ಅತ್ಯಂತ ಚುರುಕು.

ನೋಡಲು(ವಯಸ್ಕ ಟಾಪಿರ್‌ ಗಳು) ಕಂದು?ಕಪ್ಪು ಬಣ್ಣ. ಆದರೆ ಮರಿಗಳು ತಿಳಿ ಕಂದುಬಣ್ಣವಿದ್ದು ದೇಹದ ಮೇಲೆ ಅಡ್ಡಲಾಗಿ ಕಲ್ಲಂಗಡಿ ಹಣ್ಣಿನಂಥ ಪಟ್ಟೆಗಳನ್ನು ಹೊಂದಿದ್ದು ಬೆಳೆದು ದೊಡ್ಡದಾಗುತ್ತಾ ಈ ಪಟ್ಟೆಗಳು ಮಾಯವಾಗುತ್ತದೆ. ದ. ಅಮೇರಿಕಾ ಹಾಗೂ ಬ್ರೆಜಿಲ್‌ ನಲ್ಲಿ ಟಾಪಿರ್‌ ಗಳನ್ನು ಕಾಣಬಹುದಾಗಿದೆ.

LEAVE A REPLY

Please enter your comment!
Please enter your name here