ಅಡ್ಡ ಗೋಡೆಯಿಲ್ಲದೆ ಶೌಚಾಲಯ ನಿರ್ಮಾಣ- ಟ್ರೋಲ್‌ ಆಗುತ್ತಿರುವ ಸ್ಮೃತಿ ಇರಾನಿ ಕ್ಷೇತ್ರದ ಅಸರ್ಮಪಕ ಕಾಮಗಾರಿ

ಮಂಗಳೂರು (ಅಮೇಥಿ): ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಲೋಕಸಭಾ ಕ್ಷೇತ್ರವಾದ ಅಮೇಥಿಯಲ್ಲಿ ಯಾವುದೇ ಅಡ್ಡ ಗೋಡೆ ನಿರ್ಮಿಸದೆ ಒಂದರ ಪಕ್ಕ ಒಂದರ ಹಾಗೆ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯದ ವಿಡಿಯೋ ವೈರಲ್ ಆಗಿದೆ.

ಈ ಘಟನೆಯು ಅಮೇಥಿಯ ಜಗದೀಶ್ಪುರ್ ಬ್ಲಾಕ್ ನ ಕಟೇಹ್ಟಿ ಗ್ರಾಮದಿಂದ ವರದಿಯಾಗಿದ್ದು, ಇಲ್ಲಿನ ಸಾರ್ವಜನಿಕ ಶೌಚಾಲಯವನ್ನು ಭಾರೀ ಮೊತ್ತ ವ್ಯಯಿಸಿ ನಿರ್ಮಿಸಲಾಗಿದೆ. ಈ ಸಾರ್ವಜನಿಕ ಶೌಚಾಲಯವನ್ನು ಗ್ರಾಮಸ್ಥರ ಅನುಕೂಲಕ್ಕಾಗಿ ನಿರ್ಮಿಸಲಾಗಿದ್ದರೂ, ಈ ಶೌಚಾಲಯಕ್ಕೆ ಬೀಗ ಜಡಿಯಲಾಗಿದೆ. ಶೌಚಾಲಯದಲ್ಲಿನ ಎಲ್ಲ ಐದು ಶೌಚಾಸನಗಳಲ್ಲಿ ಧೂಳು ಮೆತ್ತಿಕೊಂಡಿದೆ.

ಈ ವಿಡಿಯೊವನ್ನು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಉತ್ತರ ಪ್ರದೇಶ ಕಾಂಗ್ರೆಸ್ ಘಟಕವು, ಈ ವಿಚಿತ್ರ ಸಾರ್ವಜನಿಕ ಶೌಚಾಲಯವನ್ನು ಯಾಕೆ ವಿಶ್ವದ 8ನೇ ಅದ್ಭುತವೆಂದು ಘೋಷಿಸಬಾರದು ಎಂದು ಅಮೇಥಿ ಸಂಸದೆ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿಯನ್ನು ಗುರಿಯಾಗಿಸಿಕೊಂಡು ವ್ಯಂಗ್ಯವಾಡಿದೆ. ಈ ಘಟನೆಗೆ ಉತ್ತರದಾಯಿತ್ವವನ್ನು ಆಗ್ರಹಿಸಿರುವ ಕಾಂಗ್ರೆಸ್, ಈ ಲೋಪಕ್ಕೆ ಗುತ್ತಿಗೆದಾರ, ಅಧಿಕಾರಿಗಳು ಅಥವಾ ಕೇಂದ್ರ ಸಚಿವರೇ ಕಾರಣವೇ ಎಂದು ಪ್ರಶ್ನೆ ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಕಾಂತ್ ಯಾದವ್, ಈ ಸಾರ್ವಜನಿಕ ಶೌಚಾಲಯವು ಹಳತಾಗಿದ್ದು, ಹೊಸ ಸಾರ್ವಜನಿಕ ಶೌಚಾಲಯವನ್ನು ಗ್ರಾಮದ ಬೇರೆ ಕಡೆ ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here