ಮಂಗಳೂರು(ಜೊಹಾನ್ಸ್ ಬರ್ಗ್): ದಕ್ಷಿಣ ಆಫ್ರಿಕಾದಲ್ಲಿ ಸೆ.17ರಂದು ನಡೆದ ಭೀಕರ ರಸ್ತೆ ಅಪಘಾತವೊಂದರಲ್ಲಿ ದೈತ್ಯ ವಜ್ರ ಗಣಿಗಾರಿಕಾ ಕಂಪನಿ ಡೆ ಬೀರ್ಸ್ನ ಕನಿಷ್ಠ 20 ಮಂದಿ ಉದ್ಯೋಗಿಗಳು ಮೃತಪಟ್ಟಿದ್ದಾರೆ.
ದೇಶದಲ್ಲೇ ಅತಿದೊಡ್ಡ ವಜ್ರದ ಗಣಿ ಎನಿಸಿದ ವೆನೇಶಿಯಾ ಗಣಿಯಿಂದ ಸಿಬ್ಬಂದಿಯನ್ನು ಕರೆ ತರುತ್ತಿದ್ದ ಬಸ್ಸು, ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ ಎಂದು ಲಿಂಪೊಪೊ ಪ್ರಾಂತ್ಯದ ಸಾರಿಗೆ ಅಧಿಕಾರಿಗಳು ಹೇಳಿದ್ದಾರೆ. ಸಂಜೆ 4 ಗಂಟೆಯ ಸುಮಾರಿಗೆ ಗಣಿಯಿಂದ ಸುಮಾರು 25 ಕಿಲೋಮೀಟರ್ ದೂರದ, ಜಿಂಬಾಬ್ವೆ ಗಡಿಯಲ್ಲಿರುವ ಮುಸಿಯಾನ್ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಹಿರಿಯ ಅಧಿಕಾರಿ ಒಂಗನಿ ಚೌಕೆ ವಿವರಿಸಿದ್ದಾರೆ. ವಾರ್ಷಿಕವಾಗಿ ವಿಶ್ವದ ಒಟ್ಟು ವಜ್ರ ಉತ್ಪಾದನೆಯಲ್ಲಿ ಶೇಕಡ 40ರಷ್ಟು ಪಾಲು ಹೊಂದಿರುವ ಕಂಪನಿ 4300ಕ್ಕು ಹೆಚ್ಚು ಸಿಬ್ಬಂದಿಯನ್ನು ಹೊಂದಿದೆ. ಇದು ದೇಶದ ಅತಿದೊಡ್ಡ ವಜ್ರದ ಗಣಿಯಾಗಿದ್ದು, ಡೆ ಬೀರ್ಸ್ ಈ ಗಣಿಯಲ್ಲಿ 200 ಕೋಟಿ ಡಾಲರ್ ಹೂಡಿಕೆ ಮಾಡಿದೆ.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
We've lost lives in Musina Limpopo. Bus ya Mine ya vhathu vha Murray and Roberts yo thulana na truck."allegedly "22 people are deceased, while 4 survived… Horrific accident on a Sunday ?? pic.twitter.com/EjQZaZySfk
— Tshamano Thanyane (@Tshamano_Thanyi) September 17, 2023