ಪ್ರಾಣಿ ಪ್ರಪಂಚ-98

ವುಲ್ವರಿನ್ (Gulu gula)

ಮಕ್ಕಳಿಗಾಗಿ ವಿಶೇಷ ಮಾಹಿತಿ

ವುಲ್ವರಿನ್‌ ತೋಳವು ಮಧ್ಯಮ ಗಾತ್ರದ ಸಸ್ತನಿಯಾಗಿದೆ. ನೋಡಲು ಕರಡಿಯಂತಿರುತ್ತದೆ. ಒಂದು ಜಾತಿಯ ಮುಂಗುಸಿಯನ್ನು ಹೆಚ್ಚಾಗಿ ಹೋಲುತ್ತದೆ. ಈ ತೋಳವು ಬಲಿಷ್ಠ ಮತ್ತು ದುಷ್ಟವಾಗಿದ್ದು ಅದರ ಗಾತ್ರಕ್ಕಿಂತ ಅತ್ಯಂತ ಬಲಶಾಲಿಯಾಗಿರುತ್ತದೆ. ಕೆನಡ, ಯುರೋಪ್‌, ಉತ್ತರ ಅಮೇರಿಕ, ಧ್ರುವ ಪ್ರದೇಶ ಬಯಲು ಪ್ರದೇಶದಲ್ಲಿ ವಾಸ ಮಾಡುತ್ತವೆ. ಸಾಮಾನ್ಯವಾಗಿ ಇವುಗಳ ಆಹಾರವು ಇಲಿಗಳು, ಹೆಗ್ಗಣಗಳು, ಚಿಕ್ಕ ಸಸ್ತನಿಗಳು, ಹಕ್ಕಿಗಳು, ಮೊಟ್ಟೆಗಳು – ಇವುಗಳನ್ನು ಬೇಸಿಗೆಯಲ್ಲಿ ತಿನ್ನುತ್ತವೆ. ಚಳಿಗಾಲದಲ್ಲಿ ದೊಡ್ಡ ಪ್ರಾಣಿಗಳಾದ ಹಿಮಸಾರಂಗ, ಕುರಿಕಡವೆಗಳನ್ನು ಬೇಟೆಯಾಡುತ್ತವೆ.

LEAVE A REPLY

Please enter your comment!
Please enter your name here