ಗಾಂಧಿ-ಸಂಕ್ಷಿಪ್ತ ಜೀವನ ಕಥನ – 1

ಇಂಗ್ಲೆಂಡಿನಿಂದ ಭಾರತಕ್ಕೆ ವಾಪಸ್ (1891-1893)

ಇಂಗ್ಲೆಂಡಿನಿಂದ ಭಾರತಕ್ಕೆ ವಾಪಸಾದ ಬಳಿಕ ಗಾಂಧಿ ಮುಂಬೈ ನಗರದಲ್ಲಿ ನ್ಯಾಯವಾದಿಯಾಗಿ ವೃತ್ತಿಯನ್ನು ಪ್ರಾರಂಭಿಸಿದರು. ಆದರೆ ಅದರಲ್ಲಿ ಯಶಸ್ಸು ದೊರಕಲಿಲ್ಲ. ಅದನ್ನು ಬಿಟ್ಟು ಸ್ವಲ್ಪ ಕಾಲ ಪ್ರೌಢಶಾಲಾ ಶಿಕ್ಷಕರಾಗಿ ಕೆಲಸ ಮಾಡಿದರು. ಅದರಲ್ಲೂ ಅವರಿಗೆ ಯಶಸ್ಸು ದೊರಕಲಿಲ್ಲ. ನಿರಾಶೆಯಿಂದ ರಾಜ್‍ಕೋಟ್‍ಗೆ ಬಂದರು. ನ್ಯಾಯಾಲಯಕ್ಕೆ ಬರುವ ಕಕ್ಷಿಗಾರರಿಗೆ ಅರ್ಜಿ ಬರೆದುಕೊಡುತ್ತಾ ತೀರಾ ಸಾಧಾರಣ ಜೀವನವನ್ನು ಸಾಗಿಸಿದರು. ತನ್ನ ಅಣ್ಣನಿಗೆ ಸಹಾಯ ಮಾಡಲು ಮುಂದಾದ ಒಂದು ಪ್ರಕರಣದಲ್ಲಿ ಒಬ್ಬ ಬ್ರಿಟಿಷ್ ಅಧಿಕಾರಿಗೆ ಸಿಕ್ಕಿಬಿದ್ದು ಆ ವೃತ್ತಿಯನ್ನೂ ಬಿಡಬೇಕಾಯಿತು. ಈ ಎಲ್ಲವುಗಳಿಂದ ಅವರು ಮಾನಸಿಕವಾಗಿ ಜರ್ಝರಿತರಾದರು.

LEAVE A REPLY

Please enter your comment!
Please enter your name here