ಮಂಗಳೂರು (ಬೆಂಗಳೂರು): ಔಡಿ ಎ4 ಐಷಾರಾಮಿ ಕಾರಿನಲ್ಲಿ ಬಂದು ಕೇರಳದ ಯುವ ರೈತನೊಬ್ಬ ತರಕಾರಿ ಮಾರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.
ಕೇರಳದ ಸುಜಿತ್ ಎಸ್‌ಪಿ ಎನ್ನುವವರು ಪ್ರತಿನಿತ್ಯ ಔಡಿ ಎ4 ಕಾರಿನಲ್ಲಿ ಬಂದು ತಾವು ಬೆಳೆಯುವ ವಿವಿಧ ತರಕಾರಿಗಳನ್ನು ಸನಿಹದ ಮಾರುಕಟ್ಟೆಯಲ್ಲಿ ತಾವೇ ಮಾರಾಟ ಮಾಡಿ ಕಾರಿನಲ್ಲಿ ವಾಪಸ್ ಆಗುತ್ತಾರೆ.
ಸುಜಿತ್ ಎಸ್‌ಪಿ ಯಾವ ಊರಿನವರು ಎಂಬುದು ಬಹಿರಂಗವಾಗಿಲ್ಲ. ಆದರೆ, ಔಡಿ ಎ4 ಕಾರಿನಲ್ಲಿ ಬಂದು ಅವರು ಹರಿವೆ ಸೊಪ್ಪು ಮಾರುತ್ತಿರುವ ವಿಡಿಯೊ ಸಖತ್ ಸದ್ದು ಮಾಡಿದೆ.
ಸುಜಿತ್ ಎಸ್‌ಪಿ ಮೊದಲು ಕ್ಯಾಬ್ ಚಾಲಕರಾಗಿದ್ದರು. ಬಳಿಕ ಆಧುನಿಕ ಕೃಷಿಗೆ ಮಾರುಹೋಗಿ ಸದ್ಯ ಅವರು ಇದೀಗ ಸ್ಥಳೀಯವಾಗಿ ಉತ್ತಮ ಪ್ರಗತಿಪರ ರೈತ ಎನಿಸಿಕೊಂಡಿದ್ದಾರೆ. ಸುಜಿತ್ ಅವರ ಈ ವಿಡಿಯೊವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. 7 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
When Humility meets Luxury
Sujith SP from Kerala, who is famous on Instagram as 'Variety Farmer' gets to his roadside vegetable mart, which is nothing but a plastic sheet laid on the ground, to sell spinach; and he gets there every day in his Audi A4.
Now that is one farmer we… pic.twitter.com/XVkuYYORcQ
— Abinash Panda (@AbinashReeco) September 30, 2023