ವರ್ಣಭೇಧದ ನಾಡಿಗೆ
ಇಂತಹ ನಿರುತ್ಸಾಹ ಜನಕ ಪರಿಸ್ಥಿತಿಯಲ್ಲಿ ದಾದ ಅಬ್ದುಲ್ಲಾ ಮತ್ತು ಕಂಪೆನಿಯಲ್ಲಿ ಒಂದು ತಿಂಗಳು ಗುತ್ತಿಗೆ ಕರಾರಿನ ಮೇಲೆ ಕೆಲಸ ಮಾಡಲು ಗಾಂಧಿ ನಿರ್ಧರಿಸಿದರು. ಆಗ ಅವರ ವಯಸ್ಸು 24. ಭಾರತೀಯ ಮೂಲದ ಈ ಕಂಪನಿಯು ದಕ್ಷಿಣ ಆಫ್ರಿಕಾದಲ್ಲಿ ವಹಿವಾಟು ನಡೆಸುತ್ತಿತ್ತು. ನಟಾಲ್ ನಲ್ಲಿ ಅದರ ಕಾನೂನು ಸಲಹೆಗಾರರಾಗಿ ಸೇರಿಕೊಂಡರು. ದಕ್ಷಿಣ ಅಫ್ರಿಕಾ ದೇಶವು ಆಗ ಬ್ರಿಟಿಷ್ ಚಕ್ರಾಧಿಪತ್ಯದ ಒಂದು ಭಾಗವಾಗಿತ್ತು, ಅಲ್ಲಿ ವರ್ಣಭೇಧ ನೀತಿಯು ಜಾರಿಯಲ್ಲಿತ್ತು .ಭಾರತೀಯರಿಗೆ ನಾಗರಿಕ ಹಕ್ಕುಗಳಿರಲಿಲ್ಲ .ಬಿಳಿಯರು ಅವರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದ್ದರು.