ಎರಡು ಕಹಿ ಅನುಭವಗಳು
ಒಂದು ದಿನ ಗಾಂಧಿ ಮೊದಲನೆ ದರ್ಜೆ ಟಿಕೆಟ್ ಕೊಂಡು ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಮೊದಲನೆ ದರ್ಜೆಯಿಂದ ಮೂರನೆ ದರ್ಜೆಗೆ ತೊಲಗುವಂತೆ ಒಬ್ಬ ಬಿಳಿಯ ಅಧಿಕಾರಿ ದಬಾಯಿಸಿದ, ಗಾಂಧಿ ನಿರಾಕರಿಸಿದರು. ಪೀಟರ್ ಮ್ಯಾರಿಸ್ ಬರ್ಗ್ ರೈಲು ನಿಲ್ದಾಣದಲ್ಲಿ ಅವನು ಗಾಂಧಿಯನ್ನು ಕೆಳಕ್ಕೆ ತಳ್ಳಿಬಿಟ್ಟ. ನಂತರ ಗಾಂಧಿ ಪ್ರಯಾಣ ಮುಂದುವರಿಸಲು ಸ್ಟೇಜ್ ಕೋಚ್ ಹತ್ತಿದರು. ಬಿಳಿಯ ಪ್ರಯಾಣಿಕರಿಗೆ ಕೂರಲು ಜಾಗ ಬಿಟ್ಟು ಬಾಗಿಲ ಬಳಿ ಇದ್ದ ಹತ್ತುವ ಹಲಗೆ ಮೇಲೆ ನಿಂತುಕೊಳ್ಳುವಂತೆ ಡ್ರೈವರ್ ಹೇಳಿದ. ಗಾಂಧಿ ನಿರಾಕರಿಸಿದರು. ಡ್ರೈವರ್ ಅವರ ಮೇಲೆ ಹಲ್ಲೆ ಮಾಡಿದ. ದೌರ್ಜನ್ಯ ಮತ್ತು ಅಪಮಾನದ ಈ ಘಟನೆ ಗಾಂಧಿ ಬಾಳಿನಲ್ಲಿ ಮಹತ್ತರ ತಿರುವು ನೀಡಿದವು.
ಸಾಮಾಜಿಕ ದೌರ್ಜನ್ಯಗಳ ಬಗ್ಗೆ ಗಾಂಧಿಯಲ್ಲಿ ಅರಿವು ಮೂಡಿಸಿದವು. ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳ ವಿರುದ್ದ ಕೆಚ್ಚಿನಿಂದ ಶಕ್ತಿಯುತ ಹೋರಾಟಗಳನ್ನು ರೂಪಿಸುವ ಸಂಕಲ್ಪ ಮಾಡಿದರು ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿದ್ದ ಭಾರತೀಯರ ಮೇಲಿನ ಸರ್ವಾಧಿಕಾರ ಮತ್ತು ದೌರ್ಜನ್ಯಗಳನ್ನು ವಿರೋಧಿಸಿ ಅಹಿಂಸಾ ಮಾರ್ಗಾದಲ್ಲಿ ಹೋರಾಡಲು ನಟಾಲ್ ಕಾಂಗ್ರೆಸ್ ಎಂಬ ಸಂಘಟನೆ ಕಟ್ಟಿದರು.