ಗಾಂಧಿ-ಸಂಕ್ಷಿಪ್ತ ಜೀವನ ಕಥನ – 9

ಸರ್ಜೆಂಟ್‌ ಮೇಜರ್‌ ಗಾಂಧಿ


ಗಾಂಧಿ ದಕ್ಷಿಣ ಆಫ್ರಿಕಾದಲ್ಲಿದ್ದ ಅವಧಿಯಲ್ಲಿ ಬ್ರಿಟಿಷರು ಎರಡು ಯುದ್ದಗಳನ್ನು ಹೂಡಿದರು. ಆಫ್ರಿಕಾದ ಮೂಲನಿವಾಸಿ ಜೂಲೂಗಳ ವಿರುದ್ದ ಹೂಡಿದ ಯುಧ್ದವು 1879 ರಿಂದ 1892 ರವರೆಗೆ ನಡೆಯಿತು. ಬೋಯೆರ್‌ ಯುದ್ದವು 1899 ರಿಂದ 1902 ರವರೆಗೆ ನಡೆಯಿತು. ಗಾಂಧಿ ಗಾಯಾಳುಗಳ ಶುಶ್ರೂಷೆಗೆಂದು ಈ ಎರಡು ಯುದ್ದಗಳಲ್ಲಿ ಸ್ವಯಂಪ್ರೇರಿತ ತುರ್ತುಸೇವೆಯ ದಳಗಳನ್ನು ರಚಿಸಿದರು.

ಅವುಗಳ ನೇತೃತ್ವ ವಹಿಸಿಕೊಂಡು ಸೇವೆಯನ್ನು ಬ್ರಿಟಿಷರಿಗೆ ಒದಗಿಸಿದರು. ಅವರು ಭಾರತೀಯರಿಗೆ ಸಂಪೂರ್ಣ ಪೌರ ಹಕ್ಕುಗಳನ್ನು ಕೊಡುತ್ತಾರೆಂಬ ವಿಶ್ವಾಸದಿಂದ ಯುದ್ದದಲ್ಲಿ ಅವರಿಗೆ ಸೇವೆಯನ್ನು ಒದಗಿಸಿದ್ದರು. ಆದರೆ ಅವರ ವಿಶ್ವಾಸ ಸುಳ್ಳಾಯಿತು. ಗಾಂಧಿ ಎದೆಗುಂದದೆ ಪೌರ ಹಕ್ಕುಗಳಿಗಾಗಿ ಅಹಿಂಸಾ ಮಾರ್ಗದಲ್ಲಿ ತಮ್ಮ ಹೋರಾಟ ಮುಂದುವರೆಸಿದರು. ಸರ್ಕಾರವು ಗಾಂಧಿ ಮತ್ತು ಅವರ ನೇತೃತ್ವದ ಹೋರಾಟದ ಫಲವಾಗಿ ಹಲವು ಭಾರತೀಯರ ಪರವಾಗಿ ಹಲವು ಕಾನೂನುಗಳನ್ನು ಜಾರಿಗೊಳಿಸಿದರು.

LEAVE A REPLY

Please enter your comment!
Please enter your name here