ಮಂಗಳೂರು(ಬೆಂಗಳೂರು): ರಾಜಧಾನಿ ಬೆಂಗಳೂರಿನ ಅತ್ತಿಬೆಲೆಯ ಪಟಾಕಿ ಗೋದಾಮಿನ ಬಳಿ ಬೃಹತ್ ಪ್ರಮಾಣದಲ್ಲಿ ಪಟಾಕಿಗಳನ್ನು ಲಾರಿಯಿಂದ ಇಳಿಸುವಾಗ ಆಕಸ್ಮಿಕ ಬೆಂಕಿ ತಗುಲಿ ಸ್ಫೋಟ ಸಂಭವಿಸಿದ ಪರಿಣಾಮ 13 ಮಂದಿ ಮೃತಪಟ್ಟಿರುವ ಘಟನೆ ಅ.7ರಂದು ವರದಿಯಾಗಿದೆ.
ಅ.7ರಂದು ಸಂಜೆ ಇಲ್ಲಿನ ಅತ್ತಿಬೆಲೆ ಮುಖ್ಯ ರಸ್ತೆಯಲ್ಲಿರುವ ರಾಮಸ್ವಾಮಿ ರೆಡ್ಡಿ ಎಂಬುವರಿಗೆ ಸೇರಿದ ಪಟಾಕಿ ಗೋದಾಮಿಗೆ ಲಾರಿಯಿಂದ ಪಟಾಕಿಗಳನ್ನು ಕೆಳಗೆ ಇಳಿಸಲಾಗುತಿತ್ತು. ಈ ವೇಳೆ ಆಕಸ್ಮಿಕ ಬೆಂಕಿ ತಗುಲಿ ಕ್ಷಣಮಾತ್ರದಲ್ಲಿ ಅವಘಡ ಸಂಭವಿಸಿದೆ. ಇನ್ನೂ, 24 ಕಾರ್ಮಿಕರ ಪೈಕಿ 15 ಮಂದಿ ಸಾವನ್ನಪ್ಪಿದ್ದಾರೆ. 4 ಮಂದಿ ಕಾಣೆಯಾಗಿದ್ದಾರೆ. ಹಲವರಿಗೆ ಸಣ್ಣಪುಟ್ಟಗಾಯಗಳಾಗಿದ್ದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರೆಸಲಾಗಿದೆ. ಘಟನೆಯಲ್ಲಿ ಗೋದಾಮಿನ ಪಕ್ಕದಲ್ಲಿದ್ದ ನವೀನ್ ಎಂಬುವರಿಗೆ ಸೇರಿದ ಪಟಾಕಿ ಮಳಿಗೆಯೂ ಬೆಂಕಿಗೆ ಹೊತ್ತಿ ಉರಿದಿದೆ. ಅಲ್ಲದೆ ಅಕ್ಕಪಕ್ಕದ ಇತರೆ ನಾಲ್ಕೈದು ಅಂಗಡಿಗಳು ಬೆಂಕಿಗಾಹುತಿಗಿವೆ. ಈ ಕುರಿತು ಮಾಹಿತಿ ಪಡೆದ ಬೆನ್ನಲ್ಲೇ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಅಗ್ನಿ ದುರಂತದಲ್ಲಿ ಕೋಟ್ಯಂತರ ಮೌಲ್ಯದ ಪಟಾಕಿ ಅಗ್ನಿಗಾಹುತಿಯಾಗುವುದರೊಂದಿಗೆ 1 ಕ್ಯಾಂಟ್ರೋ, 2 ಬೊಲೆರೋ, 4 ಬೈಕ್‌ಗಳು ಸಹ ಸುಟ್ಟು ಕರಕಲಾಗಿವೆ. ದುರಂತ ಸ್ಥಳಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿದ್ದು ಮೃತರ ಕುಟುಂಬಕ್ಕೆ ಸರಕಾರದಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ