ಅಮೆರಿಕಾದ ಕ್ಲಾಡಿಯಾ ಗೋಲ್ಡಿನ್‌ ಅವರಿಗೆ ಅರ್ಥಶಾಸ್ತ್ರದಲ್ಲಿ ನೊಬೆಲ್‌ ಪ್ರಶಸ್ತಿ

ಮಂಗಳೂರು(ಕ್ಯಾಲಿಫೋರ್ನಿಯಾ): ಅಮೆರಿಕಾದ ಖ್ಯಾತ ಅರ್ಥಶಾಸ್ತ್ರಜ್ಞೆ ಕ್ಲಾಡಿಯಾ ಗೋಲ್ಡಿನ್ ಅವರು 2023ರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಮಹಿಳಾ ಕಾರ್ಮಿಕ ಮಾರುಕಟ್ಟೆ ಫಲಿತಾಂಶಗಳ ಕುರಿತಂತೆ ನಮ್ಮ ಜ್ಞಾನವನ್ನು ಹೆಚ್ಚಿಸಿದ್ದಕ್ಕಾಗಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸಾಯನ್ಸಸ್ ಹೇಳಿದೆ. ಈ ವರ್ಷದ ನೊಬೆಲ್ ಪ್ರಶಸ್ತಿಗಳ ಪೈಕಿ ಇತರ ಕ್ಷೇತ್ರಗಳ ಪ್ರಶಸ್ತಿಯನ್ನು ಈಗಾಗಲೇ ಘೋಷಿಸಲಾಗಿದ್ದು ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಈ ಬಾರಿಯ ಕೊನೆಯ ಪ್ರಶಸ್ತಿಯಾಗಿದೆ.

LEAVE A REPLY

Please enter your comment!
Please enter your name here