ಗಾಂಧಿ-ಸಂಕ್ಷಿಪ್ತ ಜೀವನ ಕಥನ – 17

ಭಿನ್ನಾಭಿಪ್ರಾಯಗಳನ್ನು ಉಪಶಮನಗೊಳಿಸುವ ಅಪೂರ್ವ ವ್ಯಕ್ತಿತ್ವ

ಕಾಂಗ್ರೆಸ್ಸಿನಲ್ಲಿ ಹಲವು ಭಿನ್ನಾಭಿಪ್ರಾಯಗಳು ತಲೆದೂರುತ್ತಿದ್ದವು. ಗಾಂಧಿ ಅವುಗಳನ್ನು ಉಪಶಮನಗೊಳಿಸುತ್ತಿದ್ದರು. ಎಲ್ಲರನ್ನೂ ಒಂದುಗೂಡಿಸಿ ಸ್ವಾತಂತ್ರ್ಯ ಚಳುವಳಿಯನ್ನು ಮುನ್ನಡೆಸುವ ಪ್ರಯತ್ನ ಅವರದ್ದಾಗಿತ್ತು. ಅವರು ಜೈಲಿನಲ್ಲಿದ್ದ ಅವಧಿಯಲ್ಲಿ ಕಾಂಗ್ರೆಸ್‌ ಸಂಘಟನೆ ಎರಡು ಹೋಳಾಯಿತು. ಹಾಗೇಯೇ ಹಿಂದೂಗಳು ಮತ್ತು ಮುಸ್ಲಿಮರ ನಡುವೆಯೂ ಚಳುವಳಿ ಬಗ್ಗೆ ಭಿನ್ನಾಭಿಪ್ರಾಯಗಳು ಮೂಡಿದವು. ಅಸಹಕಾರ ಚಳುವಳಿಯು ಮುರಿದು ಬೀಳುವ ಸಂದರ್ಭವು ಕೂಡ ಉಂಟಾಯಿತು. ಗಾಂಧಿ ಇದನ್ನು ಸರಿಪಡಿಸಲು ಹಲವು ಬಗೆಯಲ್ಲಿ ಪ್ರಯತ್ನಿಸಿದರು. ಮೂರುವಾರಗಳ ಕಾಲ ಉಪವಾಸ ಸತ್ಯಾಗ್ರಹವನ್ನು ಕೂಡ ಕೈಗೊಂಡರು. ಸ್ವಲ್ಪ ಮಟ್ಟಿಗೆ ಈ ಭಿನ್ನಾಭಿಪ್ರಾಯಗಳು ಶಮನವಾದವು.

LEAVE A REPLY

Please enter your comment!
Please enter your name here