ಮಂಗಳೂರು/ಪುತ್ತೂರು: ನವರಾತ್ರಿಯ ದಿನಗಳಲ್ಲಿ ದುರ್ಗಾ ಮಾತೆಯನ್ನು ಒಂಭತ್ತು ಅವತಾರಗಳಲ್ಲಿ ಪೂಜಿಸುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ. ಮೊದಲ ದಿನ ಪೂಜಿಸುವ ಶಕ್ತಿ ದೇವಿಯ ಅವತಾರವೇ ಶೈಲಪುತ್ರಿ.
ಶೈಲಪುತ್ರಿಯ ರೂಪ
ಶೈಲಪುತ್ರಿಯನ್ನು ಆದಿಶಕ್ತಿಯೆಂದು ಗುರುತಿಸಲಾಗುತ್ತದೆ. ಆಕೆ ಗೂಳಿಯ ಮೇಲೆ ಸವಾರಿ ಮಾಡುತ್ತಿದ್ದ ಕಾರಣ ವೃಷವೃಧ ಎಂದು ಕರೆಯಲಾಗುತ್ತದೆ. ಶೈಲಪುತ್ರಿಯು ಮನೋಕಾರಕನಾದ ಚಂದ್ರನನ್ನು ತನ್ನ ಮಸ್ಥಿಷ್ಕದ ಮೇಲೆ ಧರಿಸಿದ್ದಾಳೆ. ತಮೋಗುಣದ ಸಂಕೆತವಾದ ತ್ರಿಶೂಲವನ್ನು ತನ್ನ ಬಲಗೈಯಲ್ಲಿ ಧಾರಣೆ ಮಾಡಿರುವ ಶ್ವೇತ ವಸ್ತ್ರಧಾರಿ ಶೈಲಪುತ್ರಿ ಮಲ್ಲಿಗೆ ಪ್ರಿಯಳು. ಶೈಲಪುತ್ರಿಯ ರೂಪ ನಾವು ಪಾಲಿಸಬೇಕಾದ ಬದುಕಿನ ತತ್ವವನ್ನು ಸೂಚಿಸುತ್ತದೆ. ಶ್ವೇತ ವಸ್ತ್ರದಲ್ಲಿರುವ ಆಕೆ ಶಾಂತಿಯುತ ನಡವಳಿಕೆಯನ್ನು ಬೆಳೆಸಿಕೊಳ್ಳಲು ಪ್ರೇರಣೆಯಾಗಿದ್ದಾಳೆ. ಪರ್ವತ ರಾಜನ ಮಗಳಾಗಿ ಪ್ರಕೃತಿಯನ್ನು ಪ್ರೀತಿಸಿ ಶುದ್ಧವಾಗಿರಿಸಿಕೊಳ್ಳಿ ಎಂದು ಸೂಚಿಸುತ್ತಾಳೆ. ಗೂಳಿಯ ಮೇಲೆ ಕುಳಿತಿರುವುದು ಮೂಕಪ್ರಾಣಿಗಳೆಲ್ಲವೂ ದೇವದೇವತೆಯರ ವಾಹನವಾಗಿದ್ದು, ಅದನ್ನು ಹಿಂಸಿಸಬಾರದೆಂಬ ಸಂಕೇತವಾಗಿದೆ. ಕೈಯಲ್ಲಿರುವ ತ್ರಿಶೂಲ ತಾಪತ್ರೆಯಗಳ ನಿವಾರಣೆ ಸೂಚಕ ಮತ್ತು ನಮ್ಮ ಮನಸ್ಸು ದುಷ್ಟತನದತ್ತ ಸರಿಯಬಾರದು. ಹಾಗಾದಲ್ಲಿ ಶೂಲದಂತಹ ಅಸ್ತ್ರದಿಂದ ನಮ್ಮನ್ನು ನಾವೇ ಇರಿದುಕೊಂಡಂತೆ ಎಂಬುವುದನ್ನು ಸಾರುತ್ತದೆ. ಕೈಯಲ್ಲಿರುವ ಕಮಲವು ವಿನಯ ಮತ್ತು ತಾಳ್ಮೆಯ ಸಂಕೇತ. ತಿಳಿಯಾದ ಮನಸ್ಸಿನಲ್ಲಿ ತಳಮಳವಿಲ್ಲ. ಸತ್ಯದ ಹಾದಿಯಷ್ಟೇ ಕಾಣುತ್ತದೆ. ಇದಲ್ಲದೇ ದೇವಿ ರೂಪಗಳು ಹೆಣ್ಣಿನ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಉಪನಿಷತ್ತಿನಲ್ಲಿ ಹೇಳಿರುವಂತೆ ಶೈಲಪುತ್ರಿ ಇಂದ್ರ ಮತ್ತು ಇತರ ದೇವತೆಗಳ ಈಷ್ರ್ಯಾ ಮನೋಭಾವನೆಯನ್ನು ನಿಯಂತ್ರಿಸುತ್ತಾಳೆ. ಇದರಿಂದ ಅಪಮಾನಗೊಂಡ ಇಂದ್ರಾದಿ ದೇವತೆಗಳು ಆಕೆಯ ಮುಂದೆ ಶರಣಾಗುತ್ತಾರೆ. ತ್ವಂ ಬ್ರಹ್ಮಾಸಿ ಎಂದು ಉದ್ಗರಿಸುತ್ತಾರೆ. ಶೈಲಪುತ್ರಿ ಸಹನೆಯ ಪ್ರತೀಕವಾಗಿದ್ದು ಮೂಲಾಧರ ಚಕ್ರವು ಬೆನ್ನುಹುರಿಯ ಕೆಳಗಿದ್ದು ಸುಪ್ತಚೈತನ್ಯದ ಮೂಲಬಿಂದುವಾಗಿದ್ದು ಕುಂಡಲಿನಿ ಶಕ್ತಿಯ ಜಾಗೃತ ಸ್ಥಾನವಾಗಿದೆ.
ಶೈಲಪುತ್ರಿಯ ಪೂಜೆ
ನವರಾತ್ರಿ ಪೂಜೆಯ ಸಂದರ್ಭದಲ್ಲಿ ಯೋಗ ಸಾಧಕರು ಮೂಲಾಧರ ಚಕ್ರದ ಮೇಲೆ ಗಮನವಿಟ್ಟು ಧ್ಯಾನ ಮಾಡುತ್ತಾರೆ. ಆಧ್ಯಾತ್ಮ ಸಾಧನೆಯಲ್ಲಿ ಇದು ಮೊದಲ ಹೆಜ್ಜೆಯೆಂದರೂ ತಪ್ಪಿಲ್ಲ. ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಲು ಬಯಸುವ ಚಂಚಲ ಸ್ವಭಾವದವರು ಶೈಲಪುತ್ರಿಯ ಆರಾಧನೆ ಮಾಡಬೇಕು. ಶೈಲಪುತ್ರಿಯ ಆರಾಧನೆಯಿಂದ ಸಾಧಕನಿಗೆ ಬಲ, ಶೌರ್ಯ ಮತ್ತು ಇಂದ್ರೀಯ ನಿಗ್ರಹದ ಶಕ್ತ ಬರುತ್ತದೆ.
ನವರಾತ್ರಿಯ ಮೊದಲ ದಿನ ಶೈಲಪುತ್ರಿಗೆ ಮಲ್ಲಿಗೆ ಅರ್ಪಿಸಿ ಪೂಜಿಸಲಾಗುತ್ತದೆ. ಈ ದಿನ ಹಳದಿ ಬಣ್ಣಕ್ಕೆ ಸೀಮಿತವಾಗಿರುವುದರಿಂದ ಹಳದಿ ಬಟ್ಟೆಯನ್ನು ಧರಿಸಲಾಗುತ್ತದೆ.
ಶೈಲಪುತ್ರಿ ಕವಚ ಮಂತ್ರ
ರಕ್ಷಣೆಗಾಗಿ ಮತ್ತು ಆಶೀರ್ವಾದಕ್ಕಾಗಿ ಈ ಶ್ಲೋಕವನ್ನು ಪಠಿಸಲಾಗುತ್ತದೆ.
ಓಂಕಾರಹಃ ಮೇ ಶಿರಾಹ್ ಪಟು ಮೂಲಾಧರ ನಿವಾಸಿನಿ l
ಹಿಮಾಕರಹಃ ಪಟು ಲಾಲೇಟ್ ಬಿಜರೂಪ ಮಹೇಶ್ವರಿ ll
ಶ್ರೀಂಕಾರ ಪಟು ವಾದನೇ ಲಾವಣ್ಯ ಮಹೇಶ್ವರೀ l
ಹಂಕಾರ ಪಟು ಹೃದಯಯಂ ತಾರಣಿ ಶಕ್ತಿ ಸ್ವಾಘ್ರಿತಾ
ಫಟ್ಕರಾ ಪಟು ಸರ್ವಾಂಗೆ ಸರ್ವ ಸಿದ್ಧಿ ಫಲಪ್ರದಾ ll