ಅಸ್ಪೃಶ್ಯತಾ ನಿವಾರಣೆ

ಅಸ್ಪೃಶ್ಯತೆಯು ಹಿಂದೂಧರ್ಮಕ್ಕೆ ಅಂಟಿಕೊಂಡ ಶಾಪ ಎನ್ನುತ್ತಿದ್ದರು. ಅಸ್ಪೃಶ್ಯರನ್ನು ಹರಿಜನ ಎಂದು ಕರೆದರು. ಅಸ್ಪೃಶ್ಯತಾ ನಿವಾರಣೆಗಾಗಿ ಹರಿಜನ ಸೇವಕ ಸಂಘವನ್ನು ಸ್ಥಾಪಿಸಿ ಹಲವಾರು ಕಾರ್ಯಕ್ರಮಗಳನ್ನುಹಮ್ಮಿಕೊಂಡರು. ಹಿಂಸಾಮಾರ್ಗದಿಂದ ಯಾವುದೇ ಬದಲಾವಣೆಯನ್ನು ತರುವುದಕ್ಕಿಂತ ಮನಪರಿವರ್ತನೆಯಿಂದ ಬದಲಾವಣೆ ತರುವುದು ಸೂಕ್ತ ಎನ್ನುವುದು ಅವರ ನಂಬಿಕೆಯಾಗಿತ್ತು. ಮನುಷ್ಯನು ವ್ಯಕ್ತಿಯಾಗಿ ಮತ್ತು ಸಾಮಾಜಿಕನಾಗಿ ಅನುಸಸಿಸಬೇಕಾದ ನೈತಿಕತೆಗೆ ಗಾಂಧಿಯವರು ಒತ್ತು ಕೊಟ್ಟಿದ್ದರು. ಅವರ ಎಲ್ಲ ಆದರ್ಶಗಳ ಅನುಷಾನಕ್ಕಾಗಿ ಸಾಬರಮತಿ ಮತ್ತು ವಾರ್ಧಗಳಲ್ಲಿ ಆಶ್ರಮಗಳನ್ನು ಪ್ರಾರಂಭಿಸಿದರು. ಶಿಸ್ತು, ಶಾಂತಿ, ಸಂಯಮ ಮತ್ತು ಸದಾಚಾರಗಳೆಂಬ ಮೌಲ್ಯಗಳನ್ನು ಬಿತ್ತಿ ಬೆಳೆಸಿದರು. ಈ ದಿಕ್ಕಿನಲ್ಲಿ ನಡೆಯಲು ಸಾವಿರಾರು ಕಾರ್ಯಕರ್ತರನ್ನು ಸಿದ್ಧಗೊಳಿಸಿದರು.

LEAVE A REPLY

Please enter your comment!
Please enter your name here