ಮಂಗಳೂರು: ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮೆಜಾರಿಟಿ ಬರಲಿದೆ ಎಂದು ಬಹುತೇಕ ಸರ್ವೇ ವರದಿಗಳಲ್ಲಿ ಹೇಳಲಾಗಿದ್ದು ಕಾಂಗ್ರೆಸ್ ಪರ ಜನರ ಒಲವು ಕಂಡುಬಂದಿದೆ ಎಂದು ಮಂಗಳೂರಿನಲ್ಲಿ ರಾಜ್ಯಸಭೆ ಸದಸ್ಯ ಡಾ. ನಾಸಿರ್ ಹುಸೇನ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ. ನಾಸಿರ್ ಹುಸೇನ್, ದೇಶದಲ್ಲಿ ಕೋಮುಭಾವನೆ ಕೆರಳಿಸುವುದನ್ನು ನೋಡಿದ್ದೇವೆ. ಕರಾವಳಿ ಭಾಗದಲ್ಲಿ ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿಗೆ ಕಾಳಜಿ ಇಲ್ಲ. ಕೋಮು ದ್ವೇಷ, ಹಿಂಸೆಯನ್ನು ಸಹಿಸಲ್ಲ ಎಂದು ಮುಖ್ಯಮಂತ್ರಿ ಸೇರಿ ಉಸ್ತುವಾರಿ ಸಚಿವರು ಹೇಳಿದ್ದಾರೆ. ದ್ವೇಷ, ಹಿಂಸೆ ಮುಂದುವರಿದಲ್ಲಿ ಶಾಂತಿ ಇಲ್ಲದೇ ಇದ್ದಲ್ಲಿ ಇಲ್ಲಿ ಅಭಿವೃದ್ಧಿ ಆಗಲ್ಲ. ಹೂಡಿಕೆದಾರರು ಇಲ್ಲಿಗೆ ಬರಲು ಮುಂದೆ ಬರಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮುಂಚೂಣಿಗೆ ಬಂದಲ್ಲಿ ಮಾತ್ರ ಅಭಿವೃದ್ಧಿ, ಶಾಂತಿ ಸಾಧ್ಯ, ಇಂಡಿಯಾ ಅಲಯನ್ಸ್ ಬಂದ ಬಳಿಕ ಮೋದಿ, ಬಿಜೆಪಿಗೆ ಭಯ ಬಂದಂತೆ ಕಾಣುತ್ತಿದೆ. ನಾವು ಪಂಚರಾಜ್ಯ ಮತ್ತು ಲೋಕಸಭೆ ಚುನಾವಣೆಯಲ್ಲಿ ಗೆಲ್ಲುತ್ತೇವೆ. ನಲ್ವತ್ತು ಪರ್ಸೆಂಟ್ ಕಮಿಷನ್ ಕಾಂಗ್ರೆಸ್ ಆರೋಪ ಮಾಡಿದ್ದಲ್ಲ, ಗುತ್ತಿಗೆದಾರರು ಮಾಡಿದ್ದು. ಐಟಿ ದಾಳಿ ಮಾಡಲಾಗಿದೆ, ಗುತ್ತಿಗೆದಾರರು ಯಾರ ಸಂಬಂಧಿಕರು, ಯಾರ ಜೊತೆಗಿದ್ದಾರೆ ಎನ್ನುವ ಬಗ್ಗೆ ಗೊತ್ತಿದೆ, ಆದರೆ ಇದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದರು.