ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ನೇಮಿಸಲು ಹೈಕಮಾಂಡ್‌ ಚಿಂತನೆ – ಅಭಿಪ್ರಾಯ ಸಂಗ್ರಹಿಸಿದ ಹೈಕಮಾಂಡ್

ಮಂಗಳೂರು(ಬೆಂಗಳೂರು): ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷೆ ಸ್ಥಾನಕ್ಕೆ ನೇಮಿಸಲು ಪಕ್ಷದ ಹೈಕಮಾಂಡ್‌ ಒಲವು ತೋರಿದೆ. ಈ ಕುರಿತು ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಪ್ರಮುಖರ ಅಭಿಪ್ರಾಯ ಕೇಳಲಾಗಿದ್ದು, ಶೀಘ್ರದಲ್ಲೇ ಹೈಕಮಾಂಡ್‌ ಸೂಕ್ತ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿರುವ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ತರುವುದು ಯಡಿಯೂರಪ್ಪನವರ ಅಪೇಕ್ಷೆಯಾಗಿತ್ತು. ಆದರೆ, ಪಕ್ಷದ ಮತ್ತೊಂದು ಬಣ ಈ ಪ್ರಸ್ತಾಪಕ್ಕೆ ಹೈಕಮಾಂಡ್‌ ಅಂಗಳದಲ್ಲಿ ವಿರೋಧ ವ್ಯಕ್ತಪಡಿಸಿತ್ತು. ಇನ್ನು ಯಡಿಯೂರಪ್ಪ ಅವರ ಇನ್ನೋರ್ವ ಪುತ್ರ ಸಂಸದ ರಾಘವೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸುವ ಬಗ್ಗೆ ಖುದ್ದು ಯಡಿಯೂರಪ್ಪ ಅವರಿಗೆ ಒಲವಿರಲಿಲ್ಲ. ನಾನಾ ಆಯಾಮಗಳಿಂದ ಪರಾಮರ್ಶೆ ನಡೆಸಿದ ಹೈಕಮಾಂಡ್‌, ಶೋಭಾ ಕರಂದ್ಲಾಜೆ ಈ ಸ್ಥಾನಕ್ಕೆ ಒಮ್ಮತದ ಆಯ್ಕೆಯಾಗಬಹುದು ಎಂಬ ಲೆಕ್ಕಾಚಾರಕ್ಕೆ ಬಂದಿದೆ. ಮಾತ್ರವಲ್ಲ ಈ ನೇಮಕವನ್ನು ಯಡಿಯೂರಪ್ಪ ಬೆಂಬಲಿಸುತ್ತಾರೆ ಎನ್ನುವ ಬಗ್ಗೆ ಪೂರ್ಣ ವಿಶ್ವಾಸ ಹೈಕಮಾಂಡ್‌ ನದ್ದು. ಇತರ ನಾಯಕರೂ ನಿರಾಕರಣೆ ಮಾಡುವುದಿಲ್ಲ ಎಂಬ ಅಂಶವನ್ನು ಹೈಕಮಾಂಡ್‌ ಕಂಡುಕೊಂಡಿದೆ. ಈ ನಡುವೆ ಶೋಭಾ ಕರಂದ್ಲಾಜೆ ನೇಮಕ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಯಡಿಯೂರಪ್ಪ ಅವರನ್ನು ಸಂಪರ್ಕಿಸಿ ಅಭಿಪ್ರಾಯ ಪಡೆದಿದ್ದಾರೆ ಎಂದು ಉನ್ನತ ಮೂಲಗಳು ಹೇಳಿದೆ.

LEAVE A REPLY

Please enter your comment!
Please enter your name here