ಮಂಗಳೂರು(ಕಾಸರಗೋಡು): ಶ್ರೀ ಕ್ಷೇತ್ರ ಅಯ್ಯಪ್ಪನ ಸನ್ನಿಧಾನಕ್ಕೆ ತೆರಳುವ ಮಾಲಾಧಾರಿಗಳು ಶಬರಿಮಲೆಗೆ ಅಲಂಕೃತ ವಾಹನಗಳಲ್ಲಿ ಪ್ರವೇಶಿಸದಂತೆ ಕೇರಳ ಹೈಕೋರ್ಟ್ ಆದೇಶ ಹೊರಡಿಸಿದೆ.
ವಾಹನಗಳಿಗೆ ಹೂವು ಮತ್ತು ಬಾಳೆ ಎಲೆಗಳಿಂದ ಅಲಂಕರಿಸಲು ಅವಕಾವಿಲ್ಲ ಎಂದು ಹೈಕೋರ್ಟ್ ಹೇಳಿದೆ. ಹೂವು ಮತ್ತು ಎಲೆಗಳಿಂದ ಅಲಂಕೃತವಾಗಿರುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ವಾಹನಗಳನ್ನು ಅಲಂಕರಿಸುವುದು ಮೋಟಾರು ವಾಹನಗಳ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಹೈಕೋರ್ಟ್ ಹೇಳಿದೆ.